
ಗೋಡಂಬಿಯಲ್ಲಿ ಉನ್ನತ ಮಟ್ಟದ ಒಮೆಗಾ-೩ ಅಲ್ಪಾ ಲಿನೊಲೆನಿಕ್ ಆಮ್ಲವಿದೆ ಮತ್ತು ಏಕಪರ್ಯಾಪ್ತ ಆಲಿರೀಕ್ ಆಮ್ಲವಿದೆ. ಇದನ್ನು ಹೊರತುಪಡಿಸಿ, ಇತರ ವಿವಿಧ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಗೋಡಂಬಿಯಲ್ಲಿದೆ. ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ಗೋಡಂಬಿಯಲ್ಲಿರುವ ಉನ್ನತ ಮಟ್ಟದ ಕ್ಯಾಲರಿಯಿಂದಾಗಿ ತೂಕ ಹೆಚ್ಚಿಸಬಹುದು. ಆದರೆ ಗೋಡಂಬಿಯು ತೂಕ ಕಳೆದುಕೊಳ್ಳಲು ನೆರವಾಗಲಿದೆ ಎಂದು ನಿಮಗೆ ತಿಳಿದಿದೆಯಾ? ಹೌದು, ಗೋಡಂಬಿಯಿಂದಲೂ ತೂಕ ಕಳೆದುಕೊಳ್ಳಬಹುದು.
ತೂಕ ಹೆಚ್ಚಿಸಲು ಗೋಡಂಬಿಯು ನೆರವಾಗುತ್ತದೆ ಎಂದಾದರೆ ಇದನ್ನು ಯಾಕೆ ಸೇವಿಸಬೇಕು? ಆದರೆ ಗೋಡಂಬಿಯಲ್ಲಿ ಇರುವಂತಹ ಕೆಲವೊಂದು ಆರೋಗ್ಯ ಲಾಭಗಳ ಬಗ್ಗೆ ತಿಳಿದುಕೊಂಡು ನೀವು ಮುಂದುವರಿಯಿರಿ.
*ಗೋಡಂಬಿಯಲ್ಲಿ ಆರೋಗ್ಯಕರ ಕೊಬ್ಬು ಇದ್ದು, ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು. ಇದರಲ್ಲಿರುವ ಉನ್ನತ ಮಟ್ಟದ ಆ?ಯಂಟಿಆಕ್ಸಿಡೆಂಟ್ ಹೃದಯವನ್ನು ಆರೋಗ್ಯವಾಗಿಡುವುದು.
*ಗೋಡಂಬಿಯಲ್ಲಿರುವಂತಹ ಪ್ರೋಟೀನ್ ದಿನವಿಡಿ ನಿಮ್ಮ ದೇಹವು ಶಕ್ತಿಭರಿತವಾಗಿರುವಂತೆ ನೋಡಿಕೊಳ್ಳುವುದು.
*ಗೋಡಂಬಿಯಲ್ಲಿ ವಿಟಮಿನ್ ಸಿ, ಥೈಮೇನ್, ವಿಟಮಿನ್ ಬಿ೬, ಮ್ಯಾಂಗನೀಸ್, ಸತು, ತಾಮ್ರ, ಕಬ್ಬಿಣ ಮತ್ತು ಪೊಟಾಶಿಯಂ ಇದೆ.
ಹೆಚ್ಚಿನ ಪ್ರಮಾಣದಲ್ಲಿರುವ ಮೆಗ್ನೀಶಿಯಂ ಇದನ್ನೊಂದು ಆರೋಗ್ಯಕರ ಆಹಾರವನ್ನಾಗಿಸಿದೆ. ಇದು ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇಂದಿನ ಧಾವಂತದ ದಿನಗಳಲ್ಲಿ ಅಧಿಕ ರಕ್ತದೊತ್ತಡ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತಿರುವಾಗ ಗೋಡಂಬಿ ಒಂದು ಆಪದ್ಭಾಂಧವನಂತೆ ಕೆಲಸ ಮಾಡುತ್ತದೆ. ಗೋಡಂಬಿಯಲ್ಲಿರುವ ಉತ್ತಮ ಪ್ರಮಾಣದ ತಾಮ್ರ ಕೂದಲ ಹೊಳಪು ಮತ್ತು ಬಣ್ಣವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಕೂದಲು ನೆರೆಯಲು ತಾಮ್ರದ ಕೊರತೆ ಅಥವಾ ತಾಮ್ರವನ್ನು ಹಿಡಿದಿಟ್ಟುಕೊಳ್ಳುವ ಕ್ಷಮತೆ ಕಡಿಮೆಯಾಗುವುದೇ ಕಾರಣ ಎಂದು ಇತ್ತೀಚೆಗೆ ತಿಳಿದುಬಂದಿದೆ.
*ಗೋಡಂಬಿಯ ಉತ್ತಮ ಗುಣಗಳು ಇಷ್ಟೇ ಎಂದು ನಿಗದಿಪಡಿಸುವಂತಿಲ್ಲ. ಏಕೆಂದರೆ ಇದರಲ್ಲಿರುವ ಹಲವು ಪೋಷಕಾಂಶಗಳು ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಪೂರಕ ಎಂಬುದನ್ನು ದಿನಗಳೆದಂತೆ ಸಂಶೋಧನೆಗಳು ತಿಳಿಸುತ್ತಾ ಬರುತ್ತಿವೆ. ಅಂತೆಯೇ ಇದರಲ್ಲಿರುವ ಮೆಗ್ನೀಶಿಯಂ ನರವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಇನ್ನೊಂದು ವಿಶೇಷವೆಂದರೆ ಮೂಳೆಗಳಿಗೆ ಅಂಟಿಕೊಂಡಿರುವ ನರಗಳ ಗೋಡೆಗಳ ಮೂಲಕ ಕ್ಯಾಲ್ಸಿಯಂ ನರಗಳ ಒಳಭಾಗ ಪ್ರವೇಶಿಸುವುದನ್ನು ತಡೆಯುತ್ತದೆ.
*ಒಂದು ವೇಳೆ ಕ್ಯಾಲ್ಸಿಯಂ ಮೂಳೆಗಳಿಂದ ಸಡಿಲವಾಗಿ ನರಗಳು ಹೀರಿಕೊಳ್ಳುವಂತಾದರೆ ನರಗಳು ಗಟ್ಟಿಯಾಗಿಬಿಡುತ್ತವೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಇತರ ದುಷ್ಪರಿಣಾಮಗಳನ್ನೂ ಹುಟ್ಟುಹಾಕುತ್ತದೆ. ಇದೇ ರೀತಿ ಸ್ನಾಯುಗಳೂ ಸೆಡೆತಗೊಳ್ಳುವುದರಿಂದ ರಕ್ಷಣೆ ಪಡೆಯುತ್ತವೆ ಮತ್ತು ಆರೋಗ್ಯಕ್ಕೆ ಅಗತ್ಯವಿರುವಷ್ಟೇ ಸಡಿಲತೆಯನ್ನು ಹೊಂದಲು ಸಾಧ್ಯವಾಗುತ್ತದೆ.
*ಗೋಡಂಬಿಯಲ್ಲಿರುವ ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳ ದೃಢತೆಯನ್ನು ಹೆಚ್ಚಿಸಲು ಸಕ್ಷಮವಾಗಿವೆ. ನಿತ್ಯವೂ ನಾಲ್ಕಾರು ಗೋಡಂಬಿಗಳನ್ನು ತಿನ್ನುತ್ತಾ ಬಂದರೆ ಮೂಳೆ ಮತ್ತು ಹಲ್ಲುಗಳು ಸದೃಢವಾಗಿರಲು ಸಾಧ್ಯವಾಗುತ್ತದೆ. ಅಲ್ಲದೇ ಗೋಡಂಬಿ ಒಸಡುಗಳಿಗೂ ಉತ್ತಮವಾಗಿದೆ.
ಆಹಾರ ಕ್ರಮದಲ್ಲಿ ಗೋಡಂಬಿ ಸೇರ್ಪಡೆ
ಹುರಿದಿರುವಂತಹ ಗೋಡಂಬಿಗಳು, ಕರಿದು ಉಪ್ಪು ಹಾಕಿರುವಂತಹ ಗೋಡಂಬಿಗಿಂತ ತುಂಬಾ ಒಳ್ಳೆಯದು. ಕರಿದರೆ ಅದರಲ್ಲಿ ಇರುವಂತಹ ಕೊಬ್ಬು ಮತ್ತಷ್ಟು ಹೆಚ್ಚಾಗುವುದು. ಏಕ ಮತ್ತು ಬಹುಪರ್ಯಾಪ್ತ ಕೊಬ್ಬಿರುವ ಗೋಡಂಬಿಯು ಪ್ರಾಣಿಜನ್ಯ ಪ್ರೋಟೀನ್ ಮತ್ತು ಕೊಬ್ಬಿಗೆ ಒಳ್ಳೆಯ ಪರ್ಯಾಯ. ಪ್ರಾಣಿಜನ್ಯ ಕೊಬ್ಬು ಹಾಗೂ ಪ್ರೋಟೀನ್ ಗೆ ಗೋಡಂಬಿಯು ಒಳ್ಳೆಯದು ಮತ್ತು ಇದರಿಂದ ರುಚಿಕರ ತಿನಿಸುಗಳನ್ನು ತಯಾರಿಸಬಹುದು.
ಈ ಮೂಲಕವಾಗಿ ನೀವು ತೂಕ ಕಳೆದುಕೊಳ್ಳುವುದು ಮಾತ್ರವಲ್ಲದೆ, ಹೃದಯಲ್ಲಿ ಜಮೆಯಾಗಿರುವ ಕೊಬ್ಬು ಮತ್ತು ಕೊಲೆಸ್ಟ್ರಾಲ್ ತಗ್ಗಿಸಬಹುದು. ನಿಮ್ಮ ಆಹಾರಕ್ರಮದಲ್ಲಿ ಗೋಡಂಬಿ ಸೇರಿಸಲು ಒಳ್ಳೆಯ ವಿಧಾನವೆಂದು ಒಂದು ಹಿಡಿ ಹಸಿ ಗೋಂಡಂಬಿ ಸೇವಿಸುವುದು. ಇದನ್ನು ನಿಮ್ಮ ಆಹಾರ ಅಥವಾ ಬೇರೆ ಯಾವುದೇ ತಿನಿಸಿನೊಂದಿಗೆ ಸೇರಿಸಬಹುದು. ಸಲಾಡ್, ಬೀನ್ಸ್, ಯಾವುದೇ ತಿಂಡಿ ಜತೆಗೆ ಸೇರಿಸಿಕೊಳ್ಳಿ