ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ,24- ಸರ್ವೆಂಟ್ಸ್ ಆಫ್ ಇಂಡಿಯನ್ ಸೊಸೈಟಿ ಸ್ಥಾಪಿಸಿ, ಹೆಚ್ಚು ಹೆಚ್ಚು ಭಾರತೀಯರನ್ನು ವಿದ್ಯಾವಂತರನ್ನಾಗಿ ಮಾಡಿ,ಆ ಮೂಲಕ ಸಮಾಜ ಸುಧಾರಣೆ ಮಾಡಲು ಮುಂದಾದವರು ಗೋಪಾಲ ಕೃಷ್ಣ ಗೋಖಲೆ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗೋಖಲೆ-1866 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗೋಖಲೆಯವರು ಸೌಮ್ಯ ಸ್ವಭಾವದವರಾಗಿದ್ದು,ಅಹಿಂಸೆಯ ಮೂಲಕ ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ನಿರಂತರವಾಗಿ ಹೋರಾಡಿದವರು. ಗಾಂಧೀಜಿಯವರಿಗೆ ಸ್ಫೂರ್ತಿ ದಾಯಕರಾಗಿದ್ದರು.ಗಣಿತ ವಿಷಯದಲ್ಲಿ ವಿದ್ವಾಂಸರಾಗಿದ್ದರು.ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್,ಚಂದ್ರಪಾಲ್,ಅನಿಬೆಸೆಂಟ್ ಇವರ ಸಮಕಾಲೀನರವರಾಗಿದ್ದರು ಎಂದರು.
ಗಣಿತ ವಿಜ್ಞಾನ ಶಿಕ್ಷಕರಾದ ಮುನಾವರ ಸುಲ್ತಾನ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು ತಿಲಕ್ ಅವರ ಆದರ್ಶ ಹಾಗೂ ರಾಷ್ಟ್ರಪ್ರೇಮವನ್ನು ಮೈಗೂಡಿಸಿ ಕೊಳ್ಳಬೇಕೆಂದರು.
ಸಮಾಜ ಶಿಕ್ಷಕಿ ಶಶಮ್ಮ ಮಾತನಾಡಿ ಭಾರತೀಯರ ಹೊಂದಾಣಿಕೆ ಹಾಗೂ ಒಗ್ಗಟ್ಟಿನ ಕೊರತೆಯಿಂದ ಬ್ರಿಟಿಷ್ ರು ಹೆಚ್ಚು ವರ್ಷಗಳ ಕಾಲ ಉಳಿಯಲು ಕಾರಣ ಎಂದರು.
ಶಿಕ್ಷಕರಾದ ದಿಲ್ಷಾದ್ ಬೇಗಂ, ಉಮ್ಮೆಹಾನಿ, ರಾಮಾಂಜಿನೇಯ ಮುಂತಾದವರು ಉಪಸ್ಥಿತರಿದ್ದರು.