ಗೋಕುಲ ರಸ್ತೆ ಏಕಮುಖ ಸಂಚಾರ ಬೇಡ

ಹುಣಸೂರು,ನ.09:- ನಗರದ ಜನನಿಬಿಡಗೋಕುಲ ರಸ್ತೆಯನ್ನು ಶಾಲಾ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಏಕಮುಖ ಸಂಚಾರ ರಸ್ತೆ ಮಾಡಿರುವುದನ್ನು ವಿರೋಧಿಸಿ, ಅದರತೆರವಿಗೆ ಅಲ್ಲಿನ ವ್ಯಾಪಾರಸ್ಥರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ನಗರದ ಗೋಕುಲ ರಸ್ತೆಯಿಂದ ಹೈಟೆಕ್ ಲಕ್ಷ್ಮಣ್ ನೆತೃತ್ವದಲ್ಲಿ ಹೊರಟ ವ್ಯಾಪರಸ್ಥರತಂಡ ಮನವಿ ಪತ್ರ ಸಲ್ಲಿಸಿತ್ತು.ನಂತರ ಮಾತನಾಡಿದ ಲಕ್ಷ್ಮಣ್ ಏಕಮುಖ ಸಂಚಾರದಿಂದ ಸುಮಾರು 50 ಕ್ಕು ಹೆಚ್ಚು ವ್ಯಾಪಾರಸ್ಥ ಕುಟುಂಬಗಳು ಬೀದಿಗೆ ಬರಲಿದ್ದುತಾಲೂಕು ಆಡಳಿತ ಈ ನಿಯಮವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಶಾಲಾ ಸಮಯದಲ್ಲಿ ಮಾತ್ರ ವಿದ್ಯಾರ್ಥಿಗಳು ಓಡಾಡುವುದರಿಂದ ಬೆಳಿಗ್ಗೆ 8.30 ರಿಂದ 10.30ರವರೆಗೆ ಮಾತ್ರ ಜನಸಂದಣಿ ಇರುತ್ತೆ, ಅದಕೋಸ್ಕರ ಈ ಕಠಿಣ ನಿಯಮ ಮಾಡಿ ಪೋಲಿಸರ ಮುಖಾಂತರದಂಡ ವಿಧಿಸುತ್ತಿರುವುದು ಸರಿಯಲ್ಲ ಎಂದು ದೂರಿದ ವ್ಯಾಪರಸ್ಥರು ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಅವಕಾಶ ಮಾಡಬೇಕು ಎಂದು ಆಗ್ರಹಿಸಿದರು.
ಕೆಲ ದಿನಗಳಿಂದ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, 15 ದಿನಗಳಿಗೊಮ್ಮೆ ಎಡಭಾಗ ಬಲಭಾಗ ಬೈಕ್‍ಗಳ ನಿಲುಗಡೆ ಇರುತ್ತದೆ. ಹೀಗಿರುವಾಗ ಏಕಮುಖ ಸಂಚಾರ ಅವಶ್ಯಕತೆ ಇರುವುದಿಲ್ಲ ಇದರಜತೆಗೆ ಗೋಕುಲ ರಸ್ತೆಯ ಬದಿಯಲ್ಲಿ ವಾಸಿಸುವ ನಿವಾಸಿಗಳು ಮನೆಗಳಿಗೆ ಓಡಾಡಲು ಅವಕಾಶ ನೀಡದಿರುವುದಿಂದ ತೊಂದರೆಯಾಗಿ ಸಮಾನ್ಯಜನ ಪರದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ವಿವೇಕ್, ಮಾಜಿ ಸದಸ್ಯ ಮಹ್ಮದ್ ಶಫಿ, ಸ್ಥಳಿಯರಾದ ಗಿರೀಶ್, ಮಹೇಶ್, ಜಿ.ಮುಯೋದ್ದೀನ್, ಗುಲ್ ಮುನ್ನ, ಜಬಿ, ತೋಂಟಪ್ಪ, ಉಮೇಶ್, ಪ್ರದೀಪ್, ದಿನೇಶ್ ಹಾಗೂ ಇನ್ನಿತರರು ಇದ್ದರು.