ಗೊಳಸಾರ ಮಠದ ದರ್ಶನಕ್ಕೆ ಅವಕಾಶವಿಲ್ಲ

ಇಂಡಿ :ಎ.23: ಕೊರೋನಾ ವೈರಸ್ 2 ನೇ ಅಲೆಯ ಭೀತಿ ಹಿನ್ನಲೆಯಲ್ಲಿ ಸರ್ಕಾರ ಹೊರಡಿಸಿದ ಆದೇಶ ನಿಯಮ ಹಾಗೂ ಮಾರ್ಗಸೂಚಿಯನ್ವಯ ಮುನ್ನೆಚ್ಚರಿಕೆಯ ಕ್ರಮವಾಗಿ ತಾಲೂಕಿನ ಸುಕ್ಷೇತ್ರ ಗೊಳಸಾರ ಗ್ರಾಮದ ಶ್ರೀ ಪುಂಡಲಿಂಗೇಶ್ವರ ಮಠದ ದರ್ಶನಕ್ಕಾಗಲಿ,ಅಮವಾಸ್ಯೆ ಕಾರ್ಯಕ್ರಮಗಳಿಗಾಲಿ ,ಮಠದ ಪೀಠಾ„ಪತಿ ಅಭಿನವ ಪುಂಡಲಿಂಗ ಶ್ರೀಗಳ ಭೇಟಿಗಾಗಲಿ ಭಕ್ತರು,ಸಾರ್ವಜನಿಕರು ಬರಬಾರದು.
ಶ್ರೀಮಠದ ಸದ್ಭಕ್ತರು ಮನೆಯಲ್ಲಿ ಪ್ರಭುವಿನ ಸ್ಮರಣೆ ಮಾಡಬೇಕು. ಸರ್ಕಾರದ ಮಾರ್ಗಸೂಚಿ ಪಾಲಿಸಿ ಕೊರೋನಾ ರೋಗದಿಂದ ಜಾಗ್ರತಿ ವಹಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸ್ಯಾನಿಟೈಜರ ಬಳಕೆ ಮಾಡಿಕೊಂಡು,ಮಾಸ್ಕ ಧರಿಸಬೇಕು.ಅವಶ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಅನಾವಶ್ಯಕ ಅಲೆದಾಡವುದನ್ನು ನಿಲ್ಲಿಸಬೇಕು. ಕೋವಿಡ್-19 ರೋಗದಿಂದ ಜಾಗ್ರತವಹಿಸಬೇಕು. ಭಯಗೊಳ್ಳದೆ ಎಚ್ಚರಿಕೆಯಿಂದ ಇರಬೇಕು ಎಂದು ಶ್ರೀಮಠದ ಪೀಠಾ„ಪತಿ ಅಭಿನವ ಪುಂಡಲಿಂಗ ಶ್ರೀಗಳು ತಿಳಿಸಿದ್ದಾರೆ.