ಗೊಲ್ಲ ಜನಾಂಗದ ಕುಲಶಾಸ್ತ್ರೀ ಅಧ್ಯಯನ ಹಂಪಿ ವಿವಿಗೆ ನೀಡಲು ಶ್ರೀರಾಮುಲು ಶಿಫಾರಸ್ಸು

ಬಳ್ಳಾರಿ ಮಾ 24 : ರಾಜ್ಯದ ಗೊಲ್ಲ ಜನಾಂಗದ ಮರು ಕುಲಶಾಸ್ತ್ರ ಅಧ್ಯಯನವನ್ನು ಮಾಡಲು ಹಂಪಿ ಕನ್ನೆ ವಿವಿಗೆ ನೀಡುವಂತೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಇಲಾಖೇಯ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಗೊಲ್ಲ ಸಮುದಾಯ ಒಕ್ಕೂಟ ನಗರದಲ್ಲಿದ್ದ ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ. ಈಗಾಗಲೇ ಗೊಲ್ಲರ ಕುಲ ಶಾಸ್ತ್ರೀಯ ಅಧ್ಯಯನವನ್ನು ಮೈಸೂರು ವಿವಿಯ ಕರ್ನಾಟಕ ಬುಡಕಟ್ಟು ಸಂಶೋಧನ ಅಧ್ಯಯನ ಕೇಂದ್ರಕ್ಕೆ ನೀಡಿದ್ದು. ಅಲ್ಲಿ ಸೂಕ್ತವಾಗಿ ಮತ್ತು ಸಮರ್ಪಕವಾಗಿ ಈ ಕಾರ್ಯ ನಡೆಯದಿರುವ ಕಾರಣ ಹಂಪಿ ವಿವಿಯ ಬುಡಕಟ್ಟು ಅಧ್ಯಯನ ಕೇಂದ್ರಕ್ಕೆ ನೀಡುವಂತೆ ಒಕ್ಕೂಟದ ಅಧ್ಯಕ್ಷ ಪಿ.ಗಾದೆಪ್ಪ ಅವರು ಮಾಡಿರುವ ಮನವಿ ಮೇರೆಗೆ ಸಚಿವರು ಈ ಶಿಫಾರಸ್ಸು ಮಾಡಿದ್ದಾರೆ.