ಗೊಲ್ಲರಹಳ್ಳಿವಿ.ಎಸ್.ಎಸ್.ಬ್ಯಾಂಕ ಅಧ್ಯಕ್ಷರಾಗಿ ಕೊಟ್ರೇಶ ಆಯ್ಕೆ

ಕೊಟ್ಟೂರು ನ 20 :ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ಕೊಟ್ರೇಶ ಸೋಗಳಿ ತಂದೆ ವೀರನಗೌಡ 40 ವರ್ಷ ರೆಡ್ಡಿ ಲಿಂಗಾಯಿತ ಜನಾಂಗ ವ್ಯವಸಾಯ ದೂಪದಹಳ್ಳಿ ಗ್ರಾಮ. ಉಪಾಧ್ಯಕ್ಷರ ಸ್ಥಾನಕ್ಕೆ ಜಯಪ್ಪ ಮತ್ತಿಹಳ್ಳಿ ತಂದೆ ಪತ್ರಪ್ಪ 57 ವರ್ಷ ಲಿಂಗಾಯತ ಜನಾಂಗ ವ್ಯವಸಾಯ , ಗೊಲ್ಲರಹಳ್ಳಿ ಗ್ರಾಮ. ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಸದರಿ ಚುನಾವಣೆಯಲ್ಲಿ 12 ಜನ ಸದಸ್ಯರಿದ್ದು. ಚುನಾವಣಾ ಅಧಿಕಾರಿಯಾಗಿ ಮೂಗಪ್ಪ ಕೆಎಸ್ ಶಿಕ್ಷಕರು ಅವರು ನೆರವೇರಿಸುತ್ತಾರೆ. ಚುನಾವಣಾ ಪ್ರಕ್ರಿಯೆ ಶಾಂತರೀತಿಯಿಂದ ಮುಕ್ತಾಯಗೊಂಡಿರುತ್ತದೆ.