ಗೊಲ್ಲರಹಳ್ಳಿಯಲ್ಲಿ ವೈಭವದ ವೆಂಕಟೇಶ್ವರಸ್ವಾಮಿ ರಥೋತ್ಸವ

ದಾವಣಗೆರೆ : ತಾಲ್ಲೂಕಿನ ಮಾಯಕೊಂಡ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗೊಲ್ಲರಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ಗುರುವಾರ ಸಂಜೆ ವೈಭವದಿಂದ ಜರುಗಿತು.ಬಣ್ಣ ಬಣ್ಣದ ಬಟ್ಟೆಗಳು, ವಿವಿಧ ಪುಷ್ಪಾಲಂಕಾರಗಳಿಂದ ಅಲಂಕೃತಗೊಂಡ ತೇರಿನಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯಯ ಉತ್ಸವ ಮೂರ್ತಿ ಪ್ರತಿಷ್ಟಾಪಿಸಿ ವೆಂಕಟೇಶ್ವರ ಸ್ವಾಮಿಯಯ ಜಪ ಮಾಡುತ್ತಾ ತೇರು ಎಳೆದು ಭಕ್ತಿ ಸಮರ್ಪಿಸಿದರು. ಈ ರಥವನ್ನು ಭಕ್ತರು ಯಾವುದೇ ಧಾರ ಬಳಸದೇ ರಥದ ಚಕ್ರವನ್ನು ಎರಡೂ ಕೈಗಳಿಂದ ಹಿಂದೆ, ಮುಂದೆ ಉರುಳಿಸುತ್ತಾ ಭಕ್ತಿ ಮೆರೆಯುವುದು ವಿಶೇಷ.ಸಹಸ್ರಾರು ಭಕ್ತರು, ಗ್ರಾಮಸ್ಥರ ಜಯಘೋಷಗಳ ಮಧ್ಯೆ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ಸಾಗಿತು. ಈ ರಥೋತ್ಸವದಲ್ಲಿ ಭಕ್ತರೊಡನೆ ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿ ಜಿ.ಎಸ್. ಶ್ಯಾಮ್ ಭಕ್ತಿ, ಭಾವದಲ್ಲಿ ಪಾಲ್ಗೊಂಡಿದ್ದರು. ಗೊಲ್ಲರಹಳ್ಳಿ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಧರ್ಮದರ್ಶಿ ಬಿ.ಟಿ. ಸಿದ್ದಪ್ಪ  ಮತ್ತು ಕುಟುಂಬ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ಸೇವಾ ಕಾರ್ಯ ಕೈಗೊಂಡರು.ಹರಕೆ ಹೊತ್ತ ಭಕ್ತರು ಇಷ್ಟಾರ್ಥಗಳ ಸಿದ್ದಿಸುವಂತೆ ಪ್ರಾರ್ಥಿಸಿ ಉತ್ತುತ್ತಿ, ಬಾಳೆಹಣ್ಣು ರಥದ ಕಳಸಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.