ಗೊಬ್ಬರದ ಮಳಿಗೆಗಳಿಗೆ ಕೃಷಿ ಇಲಾಖೆ ಅಧಿಕಾರಿಗಳ ಭೇಟಿ

ಜಗಳೂರು.ಮೇ.೨೦; ತಾಲೂಕಿನಲ್ಲಿ ಕೆಲವು ಅಂಗಡಿಗಳಲ್ಲಿ  ಗೊಬ್ಬರ ದಾಸ್ತಾನು ಸರಿಯಾದ ನಿರ್ವಹಣೆ ಆಗುತ್ತಿಲ್ಲ ಎಂಬ ದೂರಿನನ್ವಯ ಜಗಳೂರು ಟೌನ್ ಮತ್ತು ಬಿಳಿಚೋಡು ಹೋಬಳಿ ಸೇರಿದಂತೆ  ಗೊಬ್ಬರದ ಅಂಗಡಿ ಮಾಲೀಕರು ಪಿ. ಓ. ಎಸ್ ಮಿಷನ್ ಮೂಲಕ ರೈತರಿಗೆ ರಸಗೂಬ್ಬರ ವಿತರಣೆ ಮಾಡುತ್ತಾರೋ ಇಲ್ಲವೋ ಎಂದು ದಾಖಲೆಗಳನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀನಿವಾಸುಲು ಪರಿಶೀಲಿಸಿದರು.ನಂತರ ಮಾತನಾಡಿದ ಅವರು ಯೂರಿಯಾ ರಸಗೊಬ್ಬರವನ್ನು ಸರಿಯಾದ ಬೆಲೆಗೆ ರೈತರಿಗೆ ಮಾರಾಟ ಮಾಡಬೇಕು ಒಬ್ಬ ರೈತರಿಗೆ ಎರಡು ಎಕರೆಗೆ ಒಂದು ಚೀಲ ಮಾತ್ರ ವಿತರಣೆ ಮಾಡಬೇಕು ಮತ್ತು ಹೆಚ್ಚಿನ ಬೆಲೆಗೆ ಯಾರು ಮಾರಾಟ ಮಾಡಬಹುದು ಕೃತಕ ಅಭಾವ ಸೃಷ್ಟಿಸಬಾರದು ಪಿ. ಓ. ಎಸ್. ಮಿಷಿನ್ ನಿಂದ ಬಿಲ್ ಕೊಡಬೇಕು ಎಂ.ಆರ್.ಪಿ ಕಿಂತೆ ಹೆಚ್ಚಿನ ಬೆಲೆಗೆ ಯಾರು ಮಾರಾಟ ಮಾರಾಟ ಮಾಡಬಾರದು. ಬಿಳಿಚೋಡು ಮತ್ತು ಜಗಳೂರು ಟೌನ್ ಎಲ್ಲಾ ಬೀಜ ರಸಗೊಬ್ಬರ ದ ಅಂಗಡಿಗಳಿಗೆ ದಿಡೀರನೆ ಭೇಟಿ ನೀಡಿ  ಮಾರಾಟಗಾರು ಮಳಿಗೆಯಲ್ಲಿ ರಸಗೊಬ್ಬರ ದರ ಪಟ್ಟಿಯನ್ನು ಹಾಕಲು ಮತ್ತು  ಗೊಬ್ಬರವನ್ನು  ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಮತ್ತು ಅಕ್ರಮ ದಾಸ್ತಾನವನ್ನು ಮಾಡುವುದಾಗಲಿ, ರೈತರಿಗೆ ಕೃತಕ ಅಭಾವ ಸೃಷ್ಟಿಸುವುದು ಆಗಲಿ. ಹೆಚ್ಚಿ ದರದಲ್ಲಿ ಮಾರಾಟಮಾಡುವುದಾಗಲಿ ಕಂಡುಬಂದರೆ ಅಂತಹ ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಲಾಗುವುದು ಎಂದು ಎಚ್ಚರಿಕೆ ನೀಡಿದರು 
ಈ ಸಂದರ್ಭದಲ್ಲಿ ಜಗಳೂರು ಕೃಷಿ ಇಲಾಖೆ ತಾಲೂಕು ತಾಂತ್ರಿಕ ಸಹಾಯಕರಾದ ರೇಣುಕಾನಂದ  ಇದ್ದರು.