ಗೊಟ್ಟ ಅಂದರೇನು ಗೊತ್ತೆ ?

ಕಲಬುರಗಿ,ಏ 28: ಜಾನುವಾರುಗಳಿಗೆ ಔಷಧ ಕುಡಿಸಲು ಬಳಸುವ ಕೊಳವೆ ಅಥವಾ ನಳಿಕೆಯಾಕಾರದ ಸಾಧನವೇ ಗೊಟ್ಟ. ಬಿದಿರು ಅಥವಾ ಮರದಿಂದ ತಯಾರಿಸಿದ ವಿವಿಧ ಅಳತೆಯ ಗೊಟ್ಟಗಳು ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿವೆ. ಇತ್ತೀಚಿಗೆ ಗಾಜಿನ ಬಾಟಲಿ ಅಥವಾ ಪ್ಲಾಸ್ಟಿಕನಿಂದ ತಯಾರಿಸಿದ ಗೊಟ್ಟಗಳು ಉಪಯೋಗಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ದನ ಕರುಗಳಿಗೆ ಹೊಟ್ಟೆ ಉಬ್ಬರವಾದಾಗ ಊರಿನ ನಾಟಿ ವೈದ್ಯರು ಕೆಲವೊಂದು ನಾಟಿ ಔಷಧವನ್ನು ಅಥವಾ ಗಂಜಿಯನ್ನು ಕುಡಿಸುತ್ತಿದ್ದರು. ಆಗ ದನ ಕರುಗಳಿಗೆ ಆರಾಮವಾಗುತಿತ್ತು. ಗೊಟ್ಟದಿಂದ ಗಂಜಿ ಅಥವಾ ಔಷದ ಕುಡಿಸುವದು ಒಂದು ಬಗೆಯ ಕೌಶಲ್ಯ.ಇದರಲ್ಲಿ ಅನುಭವ ಮತ್ತು ಅಭ್ಯಾಸ ಬಹಳ ಮುಖ್ಯವಾಗಿರುತ್ತದೆ. ಮೊದಲು ಗೊಟ್ಟದಲ್ಲಿ ದ್ರಾವಣವನ್ನು ಕುಡಿಸುವಾಗ ಮೊದಲು ಜಾನುವಾರುವಿನ ಕುತ್ತಿಗೆಯನ್ನು ಸಮಾನಾಂತರವಾಗಿ ಸ್ವಲ್ಪ ಮೇಲಕ್ಕೆತ್ತಿ ಔಷಧಿಯನ್ನು ಹಾಕುತ್ತಿದ್ದರು. ಇಂದಿಗೂ ಗ್ರಾಮೀಣ ಪ್ರದೇಶದ ಬೆರಳೆಣಿಕೆಯ ಜನರ ಮನೆಯಲ್ಲಿ ಮಾತ್ರ ಕಾಣಬಹುದು.
-ಜಿ.ಕೆ.ಪಟ್ಟಣಶೆಟ್ಟಿ.