ಗೊಂಬೆ ಆಟಿಕೆ ಕಲಿಕೋಪಕರಣಗಳು ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುತ್ತವೆ

ದೊಡವಾಡ,ಡಿ22: ಮಕ್ಕಳು ಆಟದ ಮೂಲಕ ಪಾಠ ಕಲಿಯಬೇಕು ಎಂಬ ಉದ್ದೇಶದಿಂದ ಸರಕಾರ ಅನೇಕ ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಂಡು ಜಾರಿಗೊಳಸುತ್ತಿದೆ. ಅದರಲ್ಲಿ ಗೊಂಬೆ ಆಟಿಕೆ ಆಧಾರಿತ ಪಾಠೋಪಕರಣಗಳ ಪ್ರದರ್ಶನ ಕೂಡ ಒಂದಾಗಿದೆ ಈ ಕಲಿಕೋಪಕರಣಗಳಿಂದ ಮಕ್ಕಳು ಕೇಳಿ ತಿಳಿದು ಮಾಡಿ ನಲಿಯುತ್ತ ಕಲಿಕಾಸಕ್ತಿ ಬೆಳೆಸಿಕೊಳ್ಳುತ್ತವೆ ಎಂದು ಬೈಲಹೊಂಗಲ ಬಿಇಓ ಎ.ಎನ್.ಪ್ಯಾಟಿ ಹೇಳಿದರು.
ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬುಡರಕಟ್ಟಿ ಕ್ಲಷ್ಟರ್ ಮಟ್ಟದ ಶಾಲೆಗಳಲ್ಲಿ 1 ರಿಂದ 3 ನೇ ತರಗತಿ ಬೋಧಿಸುವ ಶಿಕ್ಷಕ-ಶಿಕ್ಷಕಿಯರಿಗಾಗಿ ಇತ್ತೀಚಿಗೆ ಆಯೋಜಿಸಲಾಗಿದ್ದ ಗೊಂಬೆ ಆಟಿಕೆ ಆಧಾರಿತ ಪಾಠೋಪಕರಣ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆ ಅಭಿವೃದ್ಧಿಗೆ ದೇಣಿಗೆ ನೀಡಿದ ತಾಪಂ ಮಾಜಿ ಸದಸ್ಯ ಸಂಗಯ್ಯ ದಾಭಿಮಠರನ್ನು ಇದೇ ವೇಳೆ ಸತ್ಕರಿಸಿ ಗೌರವಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಮೈಲಾರ ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಅಡಿವೆಪ್ಪ ಮುದೆನ್ನವರ, ಅಬ್ದುಲಸಾಬ ಗರಗದ ಇದ್ದರು. ಸಿಆರ್ಪಿ ಗಳಾದ ಬಿ.ಜಿ.ಠಕ್ಕಾಯಿ, ಎಸ್.ಬಿ.ಸಂಗನಗೌಡರ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಟಿ.ಬಿ.ಶಹಾಪೂರ ಸ್ವಾಗತಿಸಿದರು. ಸಿಆರ್ಪಿಗಳಾದ ರಾಜು ಹಕ್ಕಿ ನಿರೂಪಿಸಿದರು. ರವೀಂದ್ರ ತುರಮರಿ ವಂದಿಸಿದರು. ಬುಟರಕಟ್ಟಿ ವಲಯದ ಎಲ್ಲ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು.