ಗೊಂಧಳಿ ಸಮಾಜಕ್ಕೆ ಹೆಚ್ಚಿನ ಅನುದಾನ ನೀಡಲು ಶಾಸಕ ಯತ್ನಾಳ ಅವರಿಗೆ ಮನವಿ

ವಿಜಯಪುರ, ಏ.5-ಗೊಂಧಳಿ ಸಮಾಜ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮಾಜಕ್ಕೆ ಹೆಚ್ಚಿನ ಅನುದಾನ ನೀಡುವ ಕುರಿತು. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಗೋಂದಳಿ ಸಮಾಜ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಂಘದ ಜಿಲ್ಲಾ ಅಧ್ಯಕ್ಷರಾದ ಸುರೇಶ್.ಗರುಡಕರ ಮಾತನಾಡಿ. ವಿಜಯಪುರ ಜಿಲ್ಲೆಯಲ್ಲಿ ಗೊಂಧಳಿ ಸಮಾಜದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು ನಮ್ಮ ಸಮಾಜದವರು ಸಾಮಾಜಿಕ ಆರ್ಥಿಕ ಶೈಕ್ಷಣಿಕ ಅರಿಕ. ಹಾಗೂ ರಾಜಕೀಯವಾಗಿ ಹಿಂದುಳಿದಿದ್ದೇವೆ.
ನಮ್ಮ ಜನಾಂಗದ ಶ್ರಯೋಅಭಿವೃದ್ಧಿ ಮಾಡುವುದು ಅವಶ್ಯಕವಾಗಿದ್ದು ನಮಗೆ ಶೈಕ್ಷಣಿಕ ಹಾಗೂ ಸಮುದಾಯ ಭವನ ಸಲುವಾಗಿ ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದಿಂದ ರಿ.ಸ. 152/ಬಿ & 167/ಬಿ ರಲ್ಲಿಯ ನಿವೇನ ಸಂಖ್ಯೆ ನಂ.1 ರಂತೆ ಒಟ್ಟು ಕ್ಷೇತ್ರ 1610 ಚ.ಮಿ. ನಮ್ಮ ಅಧ್ಯಕ್ಷರ ಮಂಜೂರು ಮಾಡಿದ್ದಾರೆ. ಇದರ ಒಟ್ಟು ರೂ. 34,66,000 ಗಳು ಈ ನಿವೇಶನಕ್ಕೆ ದರ ನಿಗದಿ ಪಡಿಸಿದ್ದಾರೆ. ನಾವು ರೂ:3,46,600/-ಗಳನ್ನು ಗಳನ್ನು ಭರಣಾ ಮಾಡಿದ್ದೇವೆ.ಇನ್ನುಳಿ ್ಮ ಒಟ್ಟು ರೂ: 3119,400/ ಭರಣಾ ಮಾಡಲು ತಿಳಿಸಿದ್ದಾರೆ. ನಮ್ಮ ಸಮಾಜವು ಆರ್ಥಿಕ ಬಹಳ ಹಿಂದುಳಿದಿದ್ದರಿಂದ ನಮ್ಮ ಸಮಾಜದ ವತಿಯಿಂದ ಇಷ್ಟು ಹಣವನ್ನು ಭರಣಾ ಮಾಡಲು ಆಗುತ್ತಿಲ್ಲ ಕಾರಣ ಸದರಿ ಕಾರಣ ಸದರಿ ನಿವೇಶನದ ಉಳಿದ ಒಟ್ಟು ರೂ: 31.19.400/-ಗಳನ್ನು ಸರ್ಕಾರದ ವತಿಯಿಂದ ಧರಣಾ ಮಾಡಬೇಕು ಅಥವಾ ಮನ್ನಾ ಮಾಡಬೇಕೆಂದು ವಿನಂತಿಪೂರ್ವಕವಾಗಿ ಮನವಿ ಮಾಡಿಕೊಂಡಿರು.
ನಮ್ಮ ಸಮಾಜದ ಮನವಿಗೆ ಸ್ಪಂದಿಸಿ ನಗರ ಶಾಸಕ ಬಸನಗೌಡ ಪಾಟೀಲ್ (ಯತ್ನಾಳ) ರವರು ಗೊಂಧಳಿ ಸಮಾಜವನ್ನು ಎಸ್.ಟಿ. ಜಾತಿಗೆ ಸೇರಿಸಲು ಸರಕಾರದ ಮೇಲೆ ಒತ್ತಡ ಹೇರುತ್ತನೆ ಹಾಗೂ ನಮ್ಮ ಸಮಾಜಕ್ಕೆ ಹೆಚ್ಚಿನ ಅನುದಾನ ಸಮುದಾಯ ಭವನಕ್ಕೆ ನಗರಾಬಿವೃದ್ದಿ ಪ್ರಾಧಿಕಾರಗೆ ತುಂಬಬೇಕಾದ ಹಣವನ್ನು ಸರಕಾರದಿಂದ ಮನ್ನಾ ಮಾಡಬೇಕೆಂದು ಸರಕಾರಕ್ಕೆ ಒತ್ತಾಯ ಮಾಡತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮೋಹನ ಶಿವಾಜಿ, ತುಳಸಿರಾಮ ಕಾಳೆ, ಅಂಬಾದಾಸ ಗರುಡಕರ, ಅಮರ ಗರುಡಕರ, ಮಹನ ಬಿನ್, ಅಶೋಕ ಸೂರ್ಯವಂಶಿ, ವಸಂತ ಕಾಳೆ, ಅಮೀತ ಗರುಡಕರ, ಮಲ್ಲಾರಿ ಕಾಳೆ, ಅನಿಲ ಬಿನ್, ಬಾಬು ಗರುಡಕರ, ಪರಸರಾಮ ಕಾಳೆ, ಕಿರಣ ಕಾಳೆ ಮುಂತಾದವರು ಉಪಸ್ಥತಿರಿದ್ದರು.