ಗೊಂದಲ ಸೃಷ್ಠಿ ಮಾಡುವುದು ನಿಲ್ಲಿಸಿ

ರಾಯಚೂರು,ಮಾ.೨೪- ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಇನ್ನು ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ ಈಗಾಗಲೇ ನಮಗೆ ಟಿಕೆಟ್ ಸಿಕ್ಕಿದೆ ಎಂದು ಎನ್.ಎಸ್ ಬೋಸರಾಜ್ ಅವರು ಪ್ರಚಾರ ಮಾಡುತ್ತಿರುವುದರಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಮೊದಲು ಇದನ್ನ ನಿಲ್ಲಿಸಬೇಕು.
ಇದರ ಬಗ್ಗೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಬಿ.ವಿ ನಾಯಕ್ ಅವರು ಕ್ರಮ ತೆಗೆದುಕೊಳ್ಳಬೇಕು ಎಂದು ರಾಯಚೂರು ನಗರ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಅಕ್ಬರ್ ವಡವಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಕಾಂಗ್ರೆಸ್ ಹೈಕಮಾಂಡ್ ಇನ್ನು ಯಾವ ಕ್ಷೇತ್ರಕ್ಕೂ ಟಿಕೆಟ್ ಘೋಷಣೆ ಮಾಡಿಲ್ಲ, ಕ್ಷೇತ್ರದಲ್ಲಿ ಹಲವಾರು ಜನ ಆಕಾಂಕ್ಷಿ ಅಭ್ಯರ್ಥಿಗಳು ಇದ್ದಾರೆ. ಆದರೆ ಅವರೆಲ್ಲರನ್ನ ಕಡೆಗಣಿಸಿ ಎ ಐ ಸಿ ಸಿ ಕಾರ್ಯದರ್ಶಿಯಾಗಿರುವ ಎನ್.ಎಸ್ ಬೋಸರಾಜ್ ಅವರು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವುದು ಸರಿಯಲ್ಲ, ಒಂದು ವೇಳೆ ಪ್ರಚಾರ ಮಾಡಿದ್ರು ಕಾಂಗ್ರೆಸ್ ಪಕ್ಷದ ಪರವಾಗಿ ಮಾಡಲಿ ಅದನ್ನ ಬಿಟ್ಟು ವಯಕ್ತಿಕವಾಗಿ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ತಮಗೆ ತಾವೇ ಘೋಷಣೆ ಮಾಡಿಕೊಂಡಂತೆ ಪ್ರಚಾರ ಮಾಡುತ್ತಿದ್ದಾರೆ ಈ ಬಗ್ಗೆ ಜಿಲ್ಲಾಧ್ಯಕ್ಷರಾದ ಬಿ. ವಿ ನಾಯಕ್ ಅವರು ಎನ್.ಎಸ್ ಬೋಸರಾಜ್ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಕ್ಬರ್ ವಡವಟಿ ಆಗ್ರಹ ವ್ಯಕ್ತ ಪಡಿಸಿದರು.