ಗೊಂದಲದ ಗೂಡಾದ ಶಿಕ್ಷಣ ಇಲಾಖೆ : ನಮೋಶಿ ಕಟುಟೀಕೆ

ಕಲಬುರಗಿ,ಮಾ. 22: ಶಿಸ್ತು ಬದ್ಧತೆ ಮತ್ತು ಸಂಯಮದಿಂದ ಕೂಡಿರಬೇಕಾದ ಶಿಕ್ಷಣ ಇಲಾಖೆ, ಗೊಂದಲಗಳ ಗೂಡಾಗಿರುವುದು ವಿಪರ್ಯಾಸ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡುತ್ತಾ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ ಎಂದು ವಿಧಾನ ಪರಿಷತ್ತು ಸದಸ್ಯ ಶಸೀಲ ನಮೋಶಿ ಕಟುವಾಗಿ ಟೀಕಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆ ನಡೆಸುವ ನಿರ್ಣಯ ಕೈಗೊಂಡಿದ್ದು ಮೂರು ಪರೀಕ್ಷೆ ನಡೆಸಲು ಸಿಬ್ಬಂದಿ, ಸಮಯ ಹಾಗೂ ಮೌಲ್ಯಮಾಪನ ಕಾರ್ಯಕ್ಕೆ ತಗಲುವ ಅವಧಿ, ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಇದು ಯಾವುದನ್ನು ಮುಂದಾಲೋಚನೆ ಮಾಡದೆ ಏಕಾಏಕಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಎರಡನೆಯದಾಗಿ ಸರಕಾರ ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ಸ್ಥರದ ಅಧಿಕಾರಿಗಳೊಂದಿಗೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸದೆ ದಿಢೀರನೆ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ ಪರೀಕ್ಷೆ ನಿಗದಿಗೊಳಿಸಿ ಮತ್ತೊಂದು ಎಡವಟ್ಟು ಮಾಡಿದೆ. ಇದರ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿ ಪರೀಕ್ಷೆಗಳು ರದ್ದುಪಡಿಸಿದವು. ತದನಂತರ ಸರಕಾರ ಮೇಲ್ಮನವಿ ಸಲ್ಲಿಸಿ ಮತ್ತೆ ಪರೀಕ್ಷೆ ನಡೆಸಲು ಅನುಮತಿ ಪಡೆಯಿತು, ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳು ಸುಪ್ರೀಂಕೋರ್ಟ ಮೆಟ್ಟಿಲೇರಿ ಪುನಹ ಪರೀಕ್ಷೆಗಳನ್ನು ಸ್ಥಗಿತಗೊಳಿಸಿದೆ. ಈ ಹಗ್ಗ ಜಗ್ಗಾಟದ ವ್ಯವಸ್ಥೆಯಲ್ಲಿ ಎಳೆಯ ವಯಸ್ಸಿನ ಮಕ್ಕಳು ವರ್ಷವಿಡಿ ಓದಿದ ಜ್ಞಾನವನ್ನು ಪರೀಕ್ಷೆ ಬರೆಯದೆ ಅತಂತ್ರ ಸ್ಥಿತಿಯಲ್ಲಿ ಉಳಿಯಬೇಕಾದ ಸಂದರ್ಭ ನಿರ್ಮಾಣಗೊಂಡಿದೆ. ಇದುವರೆಗೂ ಈ ಪರೀಕ್ಷೆಗೆ ಅನುಮತಿ ದೊರೆಯದೆ ಮುಂದೆ ಬಹುತೇಕ ಎಲ್ಲಾ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದ್ದು ಪರೀಕ್ಷೆ ನಡೆಯುವ ಕೇಂದ್ರಗಳಲ್ಲಿ ಉಳಿದ ತರಗತಿಗಳಿಗೆ ರಜೆ ನೀಡುವುದು ಅನಿವಾರ್ಯವಾಗುತ್ತದೆ. ಮೂರನೆಯದಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇದುವರೆಗೆ ಪರೀಕ್ಷಾ ಕಾರ್ಯ ಕÉೂೀಣೆ ಮೇಲ್ವಿಚಾರಣೆ ಕೆಲಸವನ್ನು ಪ್ರೌಢಶಾಲಾ ಶಿಕ್ಷಕರು ಸಿಬ್ಬಂದಿವರ್ಗದವರು ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಸರಕಾರ ದಿಢೀರನೆ ಈ ಕಾರ್ಯಕ್ಕೆ ಕಡ್ಡಾಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಲಾಗುವುದು, ಯಾವುದೇ ಕಾರಣಕ್ಕೂ ಪ್ರೌಢಶಾಲಾ ಶಿಕ್ಷಕರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಭಾಗವಹಿಸುವಂತಿಲ್ಲ ಎಂಬ ಕಟ್ಟಪ್ಪಣೆ ಹೊರಡಿಸಿತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರತಿರೋಧ ವ್ಯಕ್ತವಾದಾಗ ತನ್ನ ನಿಲುವನ್ನು ಬದಲಾಯಿಸಿ ಧಿಡೀರನೆ ಮತ್ತೆ ಪ್ರೌಢಶಾಲಾ ಸಿಬ್ಬಂದಿಯವರೇ ಪರೀಕ್ಷೆ ನಡೆಸಬೇಕೆಂಬ ಮರು ಆದೇಶ ಹೊರಡಿಸಿತು. ಈ ಸಮಸ್ಯೆ ಸರಿಹೋಯಿತು ಎನ್ನುವಷ್ಟರಲ್ಲಿಯೇ ಮತ್ತೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿ ಕೇಂದ್ರದ ಪ್ರತಿ ಕೋಣೆಯಲ್ಲಿ ವೆಬ್ ಕ್ಯಾಮೆರಾ ಅಳವಡಿಸಿ ಅದಕ್ಕೆ ಅಂತರ್ಜಾಲದ ವ್ಯವಸ್ಥೆ ಕಲ್ಪಿಸಿ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಮತ್ತು ಶಿಕ್ಷಣ ಇಲಾಖೆಯ ಕಚೇರಿಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮೂಲಕ ಪರೀಕ್ಷಾ ವಿಡಿಯೋ ಲೈವ್ ನೋಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಒಂದೆಡೆ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಲೆಂದು ಮೂರು ಪರೀಕ್ಷೆಗಳನ್ನು ಜಾರಿಗೆ ತಂದು ಮತ್ತೊಂದೆಡೆ ವೆಬ್ ಕ್ಯಾಸ್ತಿಂಗ್ ಅಳವಡಿಸಿ ಭಯದಿಂದ ವಿದ್ಯಾರ್ಥಿಗಳು ಅನುತ್ತೀರ್ಣರಾಗುವಂತೆ ಮಾಡುತ್ತಿರುವುದು ತುಘಲಕ್ ಸರಕಾರದ ನೀತಿಯಂತಿದೆ. ಈ ವರ್ಷದ ಎಸ್ ಎಸ್ ಎಲ್ ಸಿ ಮೊದಲ ಪರೀಕ್ಷೆ ಕೂಡ ಹೋಳಿ ಹುಣ್ಣಿಮೆ ದಿನ ನಿಗದಿ ಮಾಡಿ ಅಂದು ವಿದ್ಯಾರ್ಥಿಗಳು ಪ್ರಥಮ ಪರೀಕ್ಷೆ ಬರೆಯುವ ಸಂದರ್ಭದಲ್ಲ್ಲಿ ಅವರ ಮೇಲೆ ಬಣ್ಣ ಎರಚುವ ಸಾಧ್ಯತೆ ಇದ್ದು ಪರೀಕ್ಷೆಗೆ ಹೋದಗುವ ಸಂದರ್ಭದಲ್ಲ್ಲಿ ಮೈ ಮೇಲೆ ಯಾರಾದರೂ ಬಣ್ಣ ಹಾಕಿದರೆ ಆ ವಿದ್ಯಾರ್ಥಿ ಪರೀಕ್ಷಾ ಕೊಠಡಿಯಲ್ಲಿ ಹೋಗಿ ಹೇಗೆ ಪರೀಕ್ಷೆ ಬರೆಯಬೇಕು ಮುಂದಾಲೋಚನೆ ಮಾಡದೆ ಹೆಜ್ಜೆ ಹೆಜ್ಜೆಗೆ ಗೊಂದಲದ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಸರಕಾರ ಶೈಕ್ಷಣಿಕ ವ್ಯವಸ್ಥೆಯನ್ನು ಸಂಪೂರ್ಣ ಹದಗೆಡೆಸಿದೆ ಕಾರಣ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಈ ಕುರಿತು ಗಂಭೀರ ಆಲೋಚನೆ ಮಾಡಿ ಪರಿಸ್ಥಿತಿ ಸುಧಾರಿಸಬೇಕೆಂದು ಶಶೀಲ ನಮೋಶಿ ಆಗ್ರಹಿಸಿದ್ದಾರೆ.