ಗೊಂದಲದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚುನಾವಣೆ

ಕೊಟ್ಟೂರು ನ 07 :ಇಂದು ನಡೆದ ಪಟ್ಟಣ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು.ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ದಂತೆ ಕೊಟ್ಟೂರು ಪಟ್ಟಣದ 20 ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ರೇಖಾ ಆರ್ ಬದ್ದಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ದಿನಾಂಕ:-6-11-2020 ರಂದು ಸುಪ್ರೀಂ ಕೋರ್ಟ್ ಅಧ್ಯಕ್ಷ ಸ್ಥಾನಕ್ಕೆ ತಡೆಯಾಜ್ಞೆ ನೀಡಿದೆ.ಆದ್ದರಿಂದ ಕೊಟ್ಟೂರು ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಗೊಂದಲದಲ್ಲಿದೆ.
ಚುನಾವಣಾ ಅಧಿಕಾರಿ, ತಹಶೀಲ್ದಾರ ಜಿ.ಅನಿಲ್ ಕುಮಾರ್ ಮಾತನಾಡಿ ಚುನಾವಣೆಯ ಸಮಯದಲ್ಲಿ ಯಾವುದೇ ಮೇಲಿನ ಅಧಿಕಾರಿಗಳಿಂದ ಚುನಾವಣೆ ನಿಲ್ಲಿಸುವಂತೆ ಆದೇಶ ಬಂದಿರಲ್ಲಿಲ, ಕಾನೂನು ರೀತಿಯಲ್ಲಿ ಅಧ್ಯಕ್ಷಹಾಗೂ ಉಪಾಧ್ಯಕ್ಷ ಚುನಾವಣೆ ನಡೆಸಿರುವೆವು ಎಂದು ಸಂಜೆವಾಣಿಪತ್ರಿಕೆಗೆ ತಿಳಿಸಿದರು.