ಗೊಂದಲಕ್ಕೆ ಈಡಾಗಿರುವ ಮತದಾರರ ಪಟ್ಟಿ ಪರಿಷ್ಕರಿಸುವಂತೆ ಆಗ್ರಹ

(ಸಂಜೆವಾಣಿ ವಾರ್ತೆ)
ವಿಜಯಪುರ :ಜು.5: ವಿಜಯಪುರ ಜಿಲ್ಲೆಯಲ್ಲಿ ಮುಂಬರುವ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ ಹಾಗೂ ಗ್ರಾಮ ಪಂಚಾಯತ ಅದ್ಯಕ್ಷ- ಉಪಾಧ್ಯಕ್ಷೆ ಚುನಾವಣೆಗಳು ಜರುಗಲಿದ್ದು, ಕಾರಣ ಈ ಚುನಾವಣೆಗಳಲ್ಲಿ ಯಾವುದೇ ತರಹದ ಲೋಪ ಆಗದಂತೆ ಹಾಗೂ ಚುನಾವಣೆಗಳಲ್ಲಿ ಸ್ಪರ್ಧಿಸುವ ಸ್ಪರ್ಧಿಗಳಿಗೆ ಯಾವುದೇ ತರಹದ ಅನ್ಯಾಯ ಆಗವಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕು.ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಹಲವಾರು ಕಡೆ ಮತದಾರರ ಪಟ್ಟಿಯಲ್ಲಿ ಎರಡೆರಡು ಹೆಸರುಗಳಿದ್ದು, ಮತದಾನವು ಎರಡು ಕಡೆ ಆಗಿದ್ದು ಇಡೀ ರಾಜ್ಯದ ಜನತೆ ಗೊತ್ತಿರುವ ವಿಷಯವಾಗಿದೆ. ಇದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಈ ರೀತಿಯ ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ಆಗದೇ ಇರುವದರಿಂದ ಇಡೀ 2023ರ ವಿಧಾನಸಭೆ ಚುನಾವಣೆಯು ಗೊಂದಲಮಯವಾಗಿದೆ.
ಕಾರಣ ಮುಂಬರುವ ಚುನಾವಣೆಗಳಲ್ಲಿ ಇಂತಹ ಗೊಂದಲಗಳು ಉಂಟಾಗದಂತೆ ಹಾಗೂ ಮರಣ ಹೊಂದಿದ ವ್ಯಕ್ತಿಗಳ ಹೆಸರು ಇನ್ನುವರೆಗೆ ಮತದಾರರ ಪಟ್ಟಿಯಲ್ಲಿ ಹಾಗೆಯೇ ಉಳಿದುಕೊಂಡಿವೆ. ಇದರಿಂದ ಚುನಾವಣೆಗಳು ಗೊಂದಲ ಮಯವಾಗುತ್ತವೆ ಆದ್ದರಿಂದ ಇಂತಹ ಅಚಾತುರ್ಯ ಆಗದಂತೆ ಜಿಲ್ಲಾಡಳಿತವು ಮತದಾರರ ಪಟ್ಟಿಯನ್ನು ಪುನರ್ ಪರಿಶೀಲನೆ ಮಾಡಿ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಇಂದು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿಯ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೆಂಗನಾಳ, ಉಪಾಧ್ಯಕ್ಷರಾದ ನಿಯಾಜ ಅಹ್ಮದ ಗೋಡಿಹಾಳ, ಮಲ್ಲಿಕಾರ್ಜುನ ಎಮ್. ಕನ್ನೂರ, ರಮಜಾನ ಶೇಖ, ಮೆಹಬೂಬಲ ಮಾಲಬಾವಡಿ, ಅಮರೇಶ ತಿಲಿಯಾಳ, ಶಶಿಕಾಂತ ಎನ್. ಹೂಗಾರ, ಬಾದಶಾ ಕೆ. ಪಠಾಣ ಇನ್ನಿತರರು ಉಪಸ್ಥಿತರಿದ್ದರು.