ಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆ.21ಕ್ಕೆ

ಬೀದರ್: ಜು.26:ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘವು ನಗರದ ಪೂಜ್ಯ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಗಸ್ಟ್ 21 ರಂದು ಗೊಂಡ (ಕುರುಬ) ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲು ನಿರ್ಧರಿಸಿದೆ.

ನಗರದ ಗಾಂಧಿಗಂ???ನ ಕನಕ ಭವನದಲ್ಲಿ ನಡೆದ ಸಂಘದ ಸಭೆಯಲ್ಲಿ ಸರ್ವಾನುತಮದಿಂದ ಈ ತೀರ್ಮಾನ ಕೈಗೊಳ್ಳಲಾಯಿತು.
ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 80ಕ್ಕೂ ಅಧಿಕ ಅಂಕ ಗಳಿಸಿದ ಜಿಲ್ಲೆಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ, ಪೆÇ್ರೀತ್ಸಾಹಿಸಲಾಗುವುದು ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕೆ ಹೇಳಿದರು.

ಸಮಾಜದ ಯುವ ಮುಖಂಡ ಕೆ.ಡಿ. ಗಣೇಶ, ದೀಪಕ ಚಿದ್ರಿ, ಬೊಮ್ಮಗೊಂಡ ಚಿಟ್ಟಾವಾಡಿ, ವಿಷ್ಣು ಬೋಲಸೂರೆ, ರಮೇಶ ಜನವಾಡ, ದತ್ತು ಕಾಡವಾದ್, ಎಂ.ಪಿ. ವೈಜಿನಾಥ, ವಿಜಯಕುಮಾರ ಬ್ಯಾಲಹಳ್ಳಿ, ರಾಜಕುಮಾರ ಚಿಟ್ಟಾವಾಡಿ, ಲಕ್ಷ್ಮಣ ಆಣದೂರುವಾಡಿ, ಸಾಹಿತಿಗಳಾದ ಆತ್ಮಾನಂದ ಬಂಬಳಗಿ, ಅಮೀತ್ ಸೋಲಪುರ, ಡಾ. ಉದಯಸಿಂಗ್, ಶಿವಕುಮಾರ ಹಾಲಹಿಪ್ಪರ್ಗಾ, ಕಲ್ಲಪ್ಪ ಶಹಾಪುರ, ಶಿವಕುಮಾರ ಚಿಲ್ಲರ್ಗೆ, ಸಿದ್ದು ಗಾದಗಿ, ಅನಿಲಕುಮಾರ ಮೇತ್ರೆ ಹಳ್ಳಿ, ಲೋಕೇಶ ಮೇತ್ರೆ, ಲಕ್ಷ್ಮಣ ಎಖ್ಖೆಳ್ಳಿಕರ್, ಆನಂದ ಎಖ್ಖೆಳ್ಳಿಕರ್, ರಘುನಾಥ ಭೂರೆ, ಹಣಮಂತ ಮನ್ನಳ್ಳಿ, ರಾಕೇಶ ಕುರುಬಖೇಳಗಿ, ಸಿದ್ದಗೊಂಡ ಸಿದ್ದೇಶ್ವರ, ಶರಣಪ್ಪ ಜಮಗೆ, ವೆಂಕಟೇಶ ಮೇತ್ರೆ ಹಳ್ಳಿ, ತುಕಾರಾಮ ಸೈದಗೊಂಡ, ರವಿ ಸಿರ್ಸಿ, ಖಂಡಪ್ಪ ಪಾತರಪಳ್ಳಿ, ಪ್ರಕಾಶ ಗೋರನಳ್ಳಿ ಇದ್ದರು.