ಗೊಂಡ ಪರ್ಯಾಯ ಪದ ಪರಿಗಣನೆ :ಕೇಂದ್ರ ಸ್ಪಂದನೆ

ಬೀದರ ಸೆ 8: ದೆಹಲಿಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ
ಸಚಿವ ಅರ್ಜುನ್ ಮುಂಡಾ ಅವರಿಗೆ ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಹಾಗೂರಸಾಯನಿಕ ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತಖೂಬಾ ಹಾಗೂ ವಿಧಾನಪರಿಷತ್ ಸಭಾಧ್ಯಕ್ಷ
ರಘುನಾಥರಾವ ಮಲಕಾಪೂರೆಯವರ ನೇತೃತ್ವದಲ್ಲಿ ಕೇಂದ್ರ
ಸಚಿವರಿಗೆ ಭೇಟಿ ಮಾಡಿ, ಕುರುಬ ಸಮುದಾಯದವರನ್ನು ಎಸ್.ಟಿ
ಗೊಂಡ ಪರ್ಯಾಯ ಪದವೆಂದು ಪರಿಗಣಿಸಲು ಅಗತ್ಯ ಕ್ರಮ
ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾರವರು, ನಮ್ಮ ಭಾಗದಲ್ಲಿರುವ ಕುರುಬ ಸಮಾಜದವರು ಎಸ್.ಟಿ. ಗೊಂಡ ಪರ್ಯಾಯ ಪದಕ್ಕೆ ಸೇರದಿರುವುದರಿಂದ ಹಾಗೂ ಉದ್ಯೋಗ ಮತ್ತು ಶಿಕ್ಷಣ ಪಡೆಯುವ ಸಂಧರ್ಭಗಳಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಎಸ್.ಟಿ. ಗೊಂಡ ಹಾಗೂ ಕುರುಬ ಜನಾಂಗದಲ್ಲಿ ಯಾವೂದೆ ವ್ಯತ್ಯಾಸಗಳಿಲ್ಲಾ. ಈ ನಿಟ್ಟಿನಲ್ಲಿ ತಾವುಗಳು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ ಕುರುಬ ಜನಾಂಗಕ್ಕೆ ಸೇರಿರುವ ಜನರನ್ನು ಎಸ್.ಟಿ. ಗೊಂಡ ಪರ್ಯಾಯ ಪದದಲ್ಲಿ
ಸೇರ್ಪಡೆಗೊಳಿಸಬೇಕೆಂದು ಬುಡಕಟ್ಟು ವ್ಯವಹಾರಗಳ
ಸಚಿವ ಅರ್ಜುನ ಮುಂಡಾರವರಲ್ಲಿ ಕೋರಿದ್ದಾರೆ. ಅರ್ಜುನ ಮುಂಡಾರವರು, ಭಗವಂತ ಖೂಬಾ ಹಾಗೂ ನಿಯೋಗದ ಪ್ರಮುಖರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ. ಈ
ಸಂದರ್ಭದಲ್ಲಿ ಗೊಂಡ ಸಮುದಾಯದ ಪ್ರಮುಖರಾದ ಅಮೃತರಾವ ಚಿಮಕೊಡೆ, ಮಾಳಪ್ಪ ಅಡಸಾರೆ ಮತ್ತು ಬಸವರಾಜ ಮಾಳಗೆ, ಇತರರು ಉಪಸ್ಥಿತರಿದ್ದರು.