ಗೈರು ಹಾಜರಾದ ಅಧಿಕಾರಿಗಳನ್ನು ಅಮಾನತು ಮಾಡಿ

ಔರಾದ್: ನ.2:ಇಂದು ಔರಾದ್ ಮಿನಿ ವಿಧಾನಸೌಧದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೈರು ಹಾಜರಾದ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಔರಾದ್ ತಾಲ್ಲೂಕು ಕರವೇ ವತಿಯಿಂದ ತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿ ಒಂದು ಜಯಂತಿ ಆಗಿರಲಿ ಇಲ್ಲವೆ ರಾಷ್ಟ್ರೀಯ ಹಬ್ಬಗಳೆ ಯಾವುದೇ ಕಾರ್ಯಕ್ರಮದಲ್ಲಿ ಕೂಡ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ.

ಇಂದು ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೂಡ ಗೈರು ಹಾಜರಾಗಿದ್ದು ಇದು ಕನ್ನಡಕ್ಕೆ ಮಾಡಿರುವ ಅವಮಾನ ಎಂದು ಕರವೇ ಅಧ್ಯಕ್ಷ ರಾಜಕುಮಾರ ಏಡವೆ ಹೇಳಿದರು

ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಛೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಯಾವುದೇ ಸರ್ಕಾರಿ ಕಛೇರಿಗಳ ಮೇಲೆ ದೀಪಾಂಲಕಾರ ಮಾಡಿಲ್ಲ ಸರ್ಕಾರ ಇವರಿಗೆ ದೀಪಾಂಲಕಾರ ಮಾಡಲು ನಿಭರ್ಂದ ಹೇರಿದೆಯೆ ಎಂದು ಪ್ರಶ್ನಿಸಿದರು.

ಕರವೇ ಅಧ್ಯಕ್ಷ ರಾಜಕುಮಾರ ಏಡವೆ, ಅನಿಲ್ ಬೆಲೂರೆ, ಸುದೀಪ್ ಶಿಂಧೆ, ಸಾಗರ ಚಿದ್ರೆ ಜೊತೆಗಿದ್ದರು.