ಗೆಳೆಯ ಚಿತ್ರತಂಡಕ್ಕೆ ಡಾ.ನಾಗವೇಣಿ ಶುಭ ಹಾರೈಕೆ

ರಾಯಚೂರು,ಜು.೨೯-
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದಲ್ಲಿ ನಟಿಸುತ್ತಿದ್ದ ತಂಡ ಒಂದು ಇದೀಗ ಕನ್ನಡ ಚಿತ್ರವೊಂದು ನಿರ್ಮಿಸಿ ಆ ಚಿತ್ರದ ಹೆಸರು ಗೆಳೆಯ ಎಂದು ನಾಮಕರಣ ಮಾಡಲಾಗಿದ್ದು. ಚಿತ್ರ ಬೆಳ್ಳಿ ತೆರೆಗೆ ಬರಲು ಸಿದ್ದಗೊಂಡಿದ್ದು ಚಿತ್ರ ಯಶಸ್ವಿಯಾಗಲಿ ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಡಾ. ನಾಗವೇಣಿ ಎಸ್ ಪಾಟೀಲ್ ಅವರು ಶುಭ ಹಾರೈಸಿದರು.
ಗೆಳೆಯ ಚಿತ್ರವನ್ನು ಎಸ್‌ಎನ್‌ಎಲ್‌ಎಸ್. ಎಂಬ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಪಕರಾದ ಕುಮಾರೇಶ್ ಅವರು ನಿರ್ಮಿಸಿದ ಚಿತ್ರಕ್ಕೆ ಮಿಲನ್ ಧನು ನಿರ್ದೇಶಿಸಿದ್ದಾರೆ. ಗೆಳೆಯ ಚಿತ್ರ ನಾಯಕನಟ ರಾಗಿ ಕಾಮಿಡಿ ಕಿಲಾಡಿಗಳ ಖ್ಯಾತೆಯ ಪ್ರವೀಣ್ ಗಸ್ತಿ ನಟಿಸಿದ್ದು ಹಾಸ್ಯ ಪಾತ್ರದಲ್ಲಿ ಲೋಕೇಶ್ ಚಿತ್ರದ ನಾಯಕಿಯಾಗಿ ತೆಲುಗಿನ ಸೌಮ್ಯ ನಟಿಸಿದ್ದಾರೆ.
ಗೆಳೆಯ ಚಿತ್ರತಂಡ ಡಾ. ನಾಗವೇಣಿ ಅವರನ್ನು ಭೇಟಿ ಮಾಡಿದಾಗ ನಾಯಕ ನಟ ಹಾಗೂ ಆಸೆ ನಟರಿಗೆ ಶಾಲು ಓದಿಸಿ ಸನ್ಮಾನಿಸಿ ಗೆಳೆಯ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.