ಗೆಳೆಯನ ಪೋಟೋ ಇಲಿಯಾನ ಬಹಿರಂಗ

ಮುಂಬೈ, ಜು.೧೭- ನಟಿ ಇಲಿಯಾನ ಗರ್ಭಿಣಿ ಎಂದು ಘೋಷಣೆ ಮಾಡುತ್ತಿದ್ದಂತೆ ಹುಟ್ಟುವ ಮಗುವಿಗೆ ತಂದೆ ಯಾರು ಎಂಬ ಹಲವು ಪ್ರಶ್ನೆಗಳು ಎದ್ದಿದ್ದವು. ಸದ್ಯ ಈಗ ಅದಕ್ಕೆಲ್ಲಾ ಬ್ರೇಕ್ ಹಾಕಿರುವ ನಟಿ ಇಲಿಯಾನ ಡಿಸೋಜಾ ಕೊನೆಗೂ ತಮ್ಮ ಬಾಯ್ ಫ್ರೆಂಡ್ ಫೋಟೋವನ್ನು ಬಹಿರಂಗ ಪಡಿಸಿದ್ದಾರೆ.
ಇಷ್ಟು ದಿನ ನಟಿ ತಾವು ಗರ್ಭಿಣಿಯಾಗಿರುವುದಕ್ಕೆ ಕಾರಣ ಯಾರು ಎಂಬ ಬಗ್ಗೆ ಬಹಿರಂಗ ಪಡಿಸಿರಲಿಲ್ಲ. ಇದು ಅವರ ಅಭಿಮಾನಿಗಳಲ್ಲೂ ಸಾಕಷ್ಟು ಗೊಂದಲವನ್ನು ಸೃಷ್ಟಿ ಮಾಡಿತ್ತು. ಕೊನೆಗೂ ಬಾಯ್ ಫ್ರೆಂಡ್ ಫೋಟೋವನ್ನು ಬಹಿರಂಗ ಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ನಟಿ ಇಲಿಯಾನ ತಮ್ಮ ಇನ್ಸ್‌ಟಾಗ್ರಾಂ ಸ್ಟೋರಿಯಲ್ಲಿ ತನ್ನ ಬಾಯ್ ಫ್ರೆಂಡ್ ಜೊತೆಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾರ್ಟ್ ಎಮೋಜಿ ಹಾಕಿ ಫೋಟೋ ಶೇರ್ ಮಾಡಿರುವ ನಟಿ ಇಲಿಯಾನ ತನ್ನ ಬಾಯ್ ಫ್ರೆಂಡ್ ಜೂತೆ ಕ್ಯೂಟ್ ಆಗಿ ಫೋಟೋಗೆ ಫೋಸ್ ನೀಡಿದ್ದಾರೆ.
ಈ ಹಿಂದೆ ಕೂಡ ನಟಿ ತಮ್ಮ ಇನ್ಸ್‌ಸ್ಟಾ ಖಾತೆಯಲ್ಲಿಯೇ ಬಾಯ್‌ಫ್ರೆಂಡ್‌ನ ಮುಖ ಕಾಣದಂತೆ ಫೋಟೋವೊಂದನ್ನು ಶೇರ್ ಮಾಡಿದ್ದರು.
ಸದ್ಯ ಕೊನೆಗೂ ಇಲಿಯಾನ ತನ್ನ ಬಾಯ್‌ಫ್ರೆಂಡ್ ಯಾರು ಎಂದು ಬಹಿರಂಗ ಪಡಿಸಿದ್ದು, ಅಭಿಮಾನಿಗಳಿಗಿದ್ದ ಕುತೂಹಲಕ್ಕೆ ಬ್ರೇಕ್ ಬಿದ್ದಂತಾಗಿದೆ. ನಟಿ ಸ್ಟೋರಿಸ್ ನೋಡಿದ ಅಭಿಮಾನಿಗಳು ಲೈಕ್ಸ್ ಜೊತೆಗೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.