ಗೆಲುವು ನನ್ನದೇ, ಬಿಡೆನ್ ವಿಶ್ವಾಸ

ವಾಷಿಂಗ್ಟನ್, ನ. ೬- ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ತಮ್ಮ ಗೆಲುವು ಶತಸಿದ್ಧ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೀಡೆನ್,ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಮತಎಣಿಕೆ ಪೂರ್ಣಗೊಳ್ಳುವ ತನಕ ತಾಳ್ಮೆಯಿಂದ ಕಾಯಿರಿ ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತಎಣಿಕೆ ಶೀಘ್ರವೇ ಪೂರ್ಣಗೊಳ್ಳಲಿದೆ ಅಲ್ಲಿಯ ತನಕ ಶಾಂತಿಯಿಂದ ಕಾಯಿರಿ ಎಂದು ಹೇಳಿದ್ದಾರೆ.

ಮಿಚಿಗನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ನಡೆದ ಮತ ಎಣಿಕೆ ತೃಪ್ತಿ ಕೊಟ್ಟಿದೆ. ಜೊತೆಗೆ ಇಲ್ಲಿಯವರೆಗಿನ ಪಕ್ಷದ ಸಾಧನೆ ಬಗ್ಗೆಯೂ ಸಂತಸವಿದೆ. ಮತ ಎಣಿಕೆ ಪೂರ್ಣಗೊಂಡ ಬಳಿಕ ನನ್ನನ್ನು ಮತ್ತು ಕಮಲಾ ಹ್ಯಾರೀಸ್ ಅವರನ್ನೂ ವಿಜೇತರು ಎಂದು ಘೋಷಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಅಲ್ಲಿಯ ತನಕ ನಾವು ಫಲಿತಾಂಶ ಎದುರು ನೋಡೋಣ ಎಂದು ತಿಳಿಸಿದ್ದಾರೆ.

ಹಲವು ರಾಜ್ಯಗಳಲ್ಲಿ ಮತ ಎಣಿಕೆ ಪೂರ್ಣಗೊಂಡಿದೆ ಇನ್ನೂ ಕೆಲವು ರಾಜ್ಯಗಳಲ್ಲಿ ಮತಎಣಿಕೆ ಆಗಬೇಕಾಗಿದೆ ಆದರೆ ಈ ನಡುವೆ ಕೆಲವು ರಾಜ್ಯಗಳಲ್ಲಿ ಮತ ಎಣಿಕೆ ಗೊಂದಲದಲ್ಲಿದೆ. ಈ ಫಲಿತಾಂಶವೇ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಬೀಡೆನ್ ಹೇಳಿದ್ದಾರೆ.

ಟ್ರಂಪ್ ಪರ,ವಿರುದ್ಧ ಪ್ರತಿಭಟನೆ:

ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ .ಈ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ಹೋಗುವುದಾಗಿ ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯಲ್ಲಿ ಅಮೆರಿಕದ ವಿವಿಧ ಭಾಗಗಳಲ್ಲಿ ಪರ-ವಿರೋಧ ಪ್ರತಿಭಟನೆಗಳು ನಡೆದಿವೆ