ಗೆಲುವುಗಾಗಿ ಅಯ್ಯಪ್ಪಸ್ವಾಮಿಯ ಮೊರೆಯೇ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.18 : ಚುನಾವಣೆಗೂ‌ ಮುನ್ನ ಮತ್ತೊಮ್ಮೆ ದೇವರ ಮೊರೆ ಹೋಗಿದ್ದಾರೆ ಸಚಿವ ಬಿ. ರಾಮುಲು.
ಬಳ್ಳಾರಿ ಗ್ರಾಮೀಣ
ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ  ಘೋಷಣೆ ಮಾಡಿಕೊಂಡ ಬಳಿಕ ಅಯ್ಯಪ್ಪ ಸ್ವಾಮಿ ಮಾಲೆ ಧಾರಣೆ ಮಾಡಿದ್ದಾರೆ. 
ಪ್ರತಿಬಾರಿ ಚುನಾವಣೆ ವೇಳೆ ಅಥವಾ ನಾಮಪತ್ರ ಸಲ್ಲಿಸೋ ಮುಂಚೆ ಮಾಲೆ ಧಾರಣೆ ಮಾಡುತ್ತಾರೆ ಇವರು. ಎರಡು ದಿನ ಮಾತ್ರ ವೃತಾಚರಣೆ ಮಾಡೋ ಶ್ರೀರಾಮುಲು ನಾಳೆ ಶಬರಿ ಮಲೆಗೆ ತೆರಳಲಿದ್ದಾರೆ.
ಈ ಬಾರಿ ಶ್ರೀರಾಮುಲುಗೆ ಕಾಂಗ್ರೆಸ್ ಮಾತ್ರವಲ್ಲದೇ ಆಪ್ತಮಿತ್ರ ಜನಾರ್ದನ ರೆಡ್ಡಿ ಪಕ್ಷದಿಂದ ಕೂಡ ಪೈಪೋಟಿ ಇದೆ. ವಿರೋಧಿಗಳ ಜೊತೆಗೆ ಹೋರಾಟ ಮಾಡೋದು ಸಹಜ ಆದ್ರೇ ಆಪ್ತರು ದೂರವಾದ ಮೇಲೆ ಅವರ ವಿರುದ್ಧ ಹೋರಾಟ ಕಷ್ಟವಾಗ್ತದೆ ಎನ್ನುತ್ತಾರೆ ಶ್ರೀರಾಮುಲು ಆಪ್ತರು.