ಗೆಲುವಿನ ನಗೆ ಬೀರಿದ ಡೆಲ್ಲಿ ಕ್ಯಾಪಿಟಲ್

ದುಬೈ, ಸೆ.22- ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ವೃಷಭ್ ಪಂತ್ ಅವರ ಉತ್ತಮ‌ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಇಂದು ಡೆಲ್ಲಿ ಕ್ಯಾಪಿಟಲ್ಸ್ ಎಂಟು ವಿಕೆಟ್ ಗಳಿಂದ ನಿರಾಯಾಸ ವಿಜಯ ಸಾಧಿಸಿತು.


ಗೆಲುವಿಗೆ ಅಗತ್ಯ 135 ರನ್ ಗಳ ಅಗತ್ಯವಿತ್ತು. ಡೆಲ್ಲಿ 17.5 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು 139 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಪೃಥ್ವಿ ಶಾ 11ರನ್ ಗಳಿಸಿ ನಿರಾಸೆ ಮೂಡಿಸಿದರು. ಬಳಿಕ ಧವನ್ ಮತ್ತು ಶ್ರೇಯಸ್ ಅಯ್ಯರ್ ಉತ್ತಮ‌ ಬ್ಯಾಟಿಂಗ್ ಪ್ರದರ್ಶಿಸಿ ಉತ್ತಮ ಮುನ್ನಡೆ ದೊರಕಿಸಿಕೊಟ್ಟರು.‌ಈ ಹಂತದಲ್ಲಿ ಧವನ್ 42 ರನ್ ಗಳಿಸಿ ನಿರ್ಗಮಿಸಿದರು.
ನಂತರ ಜತೆಗೂಡಿದ ಶ್ರೇಯಸ್ 47 ಹಾಗೂ ಪಂತ್ ಅಜೇಯ 35 ರನ್ ಗಳಿಸಿ ಇನ್ನೂ‌ 2.1 ಓವರ್ ಗಳು ಬಾಕಿಯಿರುವಾಗಲೇ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ದಾಳಿ ಗೆ ದಿಟ್ಟ ಉತ್ತರ ನೀಡಲು ವಿಫಲವಾಯಿತು.
20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಹೈದರಾಬಾದ್ ನ ಯಾವುದೇ ಆಟಗಾರರು ಬಿರುಸಿನ ಬ್ಯಾಟಿಂಗ್ ಆಡುವ ಪ್ರಯತ್ನ ಮಾಡಲೇ ಇಲ್ಲ.
ಕೆಳ ಕ್ರಮಾಂಕದ ಆಟಗಾರರಾದ ಅಬ್ದುಲ್ ಸಮದ್ 28 ಹಾಗೂ ರಶೀದ್ ಖಾನ್ 22 ರನ್ ಗಳಿಸಿ ಉತ್ತಮ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಕೇನ್ ವಿಲಿಯಮ್ಸ್ ಹಾಗೂ ವೃದ್ಧಿಮಾನ್ ತಲಾ 18. ರನ್ ಗಳಿಸಿದರೆ, ಮನೀಶ್ ಪಾಂಡೆ 17 ರನ್ ಬಾರಿಸಿದರು.
ಡೆಲ್ಲಿ ಪರ ಕಗಿಸೊ ರಬಾಡ 3, ಎನ್ರಿಚ್ ನಾಕಿಯಾ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಗಳಿಸಿದರು.