ಗೆಲುವಿನ ಕಾರ್ಯತಂತ್ರದಲ್ಲಿ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ಚರ್ಚೆಯಲ್ಲಿ ಪ್ರಭಂಜನ್

ಬಳ್ಳಾರಿ ಏ 25 : ನಾಡಿದ್ದು ನಡೆಯುವ ಮತದಾನಕ್ಕೂ ಮುನ್ನ, ಮತದಾರರನ್ನು ಮತ್ತೊಮ್ಮೆ ತಮಗೆ ಮತ ನೀಡುವಂತೆ ನಾಳೆ ಮನೆ ಮನೆಗೆ ತೆರಳಿ ಹೇಗೆ ಮನವೊಲಿಸಬೇಕು ಎಂಬ ಬಗ್ಗೆ ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಬೆಂಬಲಿಗರು, ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ.
ನಿನ್ನೆ ಮತ್ತು ಇಂದು ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ವಾರ್ಡಿನ ಕಚೇರಿಗಳಲ್ಲಿ ಈ ಕಾರ್ಯವನ್ನು ಅಭ್ಯರ್ಥಿಗಳು ನಡೆಸಿದ್ದಾರೆ. ಈಗಾಗಲೇ ಮತದಾರರ ಮನೆಗೆ ಹಲವಾರು ಸುತ್ತು ಸುತ್ತಿ ಬಂದಿರುವ 3 ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಎಂ.ಪ್ರಭಂಜನ್ ಕುಮಾರ್ ಇಂದು ಮತಮ್ಮ ಕಚೇರಿಯಲ್ಲಿ ವಾರ್ಡಿನ ಮಾಜಿ ಕಾರ್ಪೋರೇಟರ್ ಫರ್ವಿನ್ ಬಾನು, ಮುಖಂರಾದ ಖಲೀಂ ಮೊದಲಾದವರೊಂದಿಗೆ ನಾಳೆ ಬೆಳಿಗ್ಗೆಯಿಂದಲೇ ಮತದಾರರ ಮನೆ ಮನೆಗೆ ತೆರಳಿ ಓಟಿನ ಚೀಟಿಗಳನ್ನು ನೀಡಿ ನಮಗೆ ಮತ ನೀಡುವಂತೆ ಮನವಿ ಮಾಡಬೇಕು. ಅಷ್ಟೇ ಅಲ್ಲದೆ ನಾಡಿದ್ದು ಮತದಾರರನ್ನು ಮನೆ ಮನೆಯಿಂದ ಕರೆದು ಮತ ಹಾಕಿಸುವ ಕೆಲಸವನ್ನು ಮಾಡಬೇಕಿದೆಂದು ಚರ್ಚಿಸಿದರು. ಅಷ್ಟೇ ಅಲ್ಲದೆ ತಾವು ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಯ ಅಂಶಗಳನ್ನು ಮತದಾರರಿಗೆ ಮನದಟ್ಟು ಮಾಡಬೇಕು ಎಂದು ಹೇಳಿದರು.