ಗೆಲುವಿನೊಂದಿಗೆ 2ನೇ ಸ್ಥಾನಕ್ಕೇರಿದ ಸನ್ರೈಸರ್ಸ್

ಹೈದ್ರಾಬಾದ್: ಅಭಿಷೇಕ್ ಶರ್ಮಾ ಅವರ ಸೋಟಕ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ತಂಡ ಪಂಜಾಬ್ ವಿರುದ್ಧ 4 ವಿಕೆಟ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಸನ್ರೈಸರ್ಸ್ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನಕ್ಕೇರಿದೆ.
ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಸನ್ರೈಸರ್ಸ್ ತಂಡ 19.1 ಓವರ್ಗಳಲ್ಲಿ 215 ರನ್ ಕಲೆ ಹಾಕಿತು.
215 ರನ್ಗಳ ಗುರಿ ಬೆನ್ನತ್ತಿದ ಸನ್ರೈಸರ್ಸ್ ತಂಡಕ್ಕೆ ಉತ್ತಮ ಆರಂ ಸಿಗಲಿಲ್ಲ. ಟ್ರಾವಿಸ್ ಹೆಡ್ 0 ಅರ್ಷದೀಪ್ಗೆ ಬಲಿಯಾದರು. ಅಭಿಷೇಕ್ ಜತೆಗೂಡಿದ ರಾಹುಲ್ ತ್ರಿಪಾಠಿ ಮೊದಲ ವಿಕೆಟ್ಗೆ 72 ರನ್ ಸೇರಿಸಿದರು. ಬೌಂಡರಿ ಮತ್ತು ಸಿಕ್ಸರ್ಗಳ ಸುರಿಮಳೆಗೈದ ಅಭಿಷೇಕ್ 21 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ರಾಹುಲ್ ತ್ರಿಪಾಠಿ (33ರನ್) ಹರ್ಷಲ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. 66 ರನ್ ಗಳಿಸಿದ್ದ ಅಭಿಷೇಕ್ ಶಶಾಂಕ್ಗೆ ವಿಕೆಟ್ ಒಪ್ಪಿಸಿದರು. ನಿತೀಶ್ ಕುಮಾರ್ (37ರನ್) ಹರ್ಷಲ್ಗೆ ಬಲಿಯಾದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಹೆನ್ರಿಕ್ ಕ್ಲಾಸೆನ್ 42, ಶಹಬಾಜ್ ಅಹ್ಮದ್ 3, ಅಬ್ದುಲ್ ಸಮಾದ್ ಅಜೇಯ 11, ಸನ್ವೀರ್ ಅಜೇಯ 6 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಂಜಾಬ್ ಪರ ಅರ್ಷದೀಪ್ 37ಕ್ಕೆ 2, ಹರ್ಷಲ್ ಪಟೇಲ್ 49ಕ್ಕೆ 2 ವಿಕೆಟ್ ಪಡೆದರು. ಹರ್ಪ್ರೀತ್ ಮತ್ತು ಶಶಾಂಕ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಪಂಜಾಬ್ ಪರ ಅಥರ್ವ ಮತ್ತು ಪ್ರಭಸಿಮ್ರಾನ್ ಮೊದಲ ವಿಕೆಟ್ಗೆ 97 ರನ್ ಸೇರಿಸಿದರು. 46 ರನ್ ಗಳಿಸಿದ್ದ ಅಥರ್ವ ನಟರಾಜನ್ಗೆ ಬಲಿಯಾದರು.ಅರ್ಧ ಶತಕ ಹೊಡೆದ ಪ್ರಭಸಿಮ್ರಾನ್ ಅವರು ವಿಯಸ್ಕಾಂತ್ಗೆ ವಿಕೆಟ್ ಒಪ್ಪಿಸಿದರು.
ರೀಲೆ ರೂಸೌ 49ರನ್ ಹೊಡೆದು ತಂಡದ ಮೊತ್ತ ಹೆಚ್ಚಿಸಿದರು. ಶಶಾಂಕ್ ಸಿಂಗ್ 2. ನಾಯಕ ಜಿತೇಶ್ ಶರ್ಮಾ ಅಜೇಯ 32, ಅಶುತೋಶ್ ಶರ್ಮಾ 2, ಶಿವಂ ಸಿಂಗ್ ಅಜೇಯ 2 ರನ್ ಗಳಿಸಿದರು.
ಸನ್ರೈಸರ್ಸ್ ಪರ ನಟರಾಜನ್ 33ಕ್ಕೆ 2, ಪ್ಯಾಟ್ ಕಮಿನ್ಸ್ 36ಕ್ಕೆ 1, ವಿಯಸ್ಕಾಂತ್ 37ಕ್ಕೆ 1 ವಿಕೆಟ್ ಪಡೆದರು.