ಗೆಲುವಿಗಿಂತ ಜವಾಬ್ದಾರಿ ಮುಖ್ಯ: ಲಕ್ಷ್ಮಣ ದಸ್ತಿ

ಕಲಬುರಗಿ:ಮಾ.23: ಗೆದ್ದರಷ್ಟೇ ಸಾಲದು ಅದರ ಜೋತೆಗೆ ಜವಾಬ್ದಾರಿ ಕೂಡ ನಿರ್ವಹಿಸುವುದು ಮುಖ್ಯ.ಅಭಿವೃದ್ಧಿ ಕೆಲಸದತ್ತ ಚಿತ್ತ ಹರಿಸಬೇಕು ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದರು.

ನಗರದ ಹಿಂದಿ ಪ್ರಚಾರ ಸಭಾಭವನದಲ್ಲಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು ಅಗತ್ಯ.ಇದ್ದ ಇಲಾಖೆಗಳು ಸ್ಥಳಾಂತರಗೊಳಿಸುವುದರಿಂದ ಈ ಭಾಗಕ್ಕೆ ಹಿನ್ನಡೆ ಉಂಟಾಗಿದೆ.ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ.ಸರಕಾರದ ನಡೆ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು.ಯಾವುದೇ ಕಾರಣಕ್ಕೆನಮ್ಮ ಭಾಗಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದರು.

ಹೋರಾಟಗಾರ ಲಿಂಗರಾಜ ಸಿರಗಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಎಚ್ಕೆಸಿಸಿಐ ಆಡಳಿತ ಮಂಡಳಿಯ ನೂತನ ಸದಸ್ಯರಾಗಿ ಆಯ್ಕೆಯಾದ ಮನೀಷ್ ಜಾಜು ಮತ್ತು ನಿಜಾಮುದ್ದೀನ್ ಚಿಸ್ತಿ ಅವರನ್ನು ಹಾಗೂ ಡಾ.ಬಿ.ಆರ್.ಅಂಬೇಡ್ಕರ ಫೆಲೋಶಿಪ್ ಪ್ರಶಸ್ತಿ ಪುರಸ್ಕೃತ ಹೋರಾಟಗಾರ ಎ.ಎಸ್.ಭದ್ರಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ವರೇಶ ಪುರಾಣಿಕ,ಸಾಜೀದ ಅಲಿ ರಂಜೋಳ್ಳ್ವಿ , ಶಿವಲಿಂಗ ಬಂಡಕ, ಬಾಬಾ ಫಕ್ರುದ್ದೀನ್ ವೇದಿಕೆ ಮೇಲಿದ್ದರು.

ಮಹ್ಮದ್ ಮಿರಾಜುದ್ದಿನ್,ಅಣ್ಣಾರಾವ ಹೆಬ್ಬಾಳ,ಡಾ.ಮಾಜೀದ ದಾಗಿ,ಸಂಧ್ಯಾರಾಜ ಸ್ಯಾಮೂವಲ್,ಜ್ಞಾನಮಿತ್ರ, ಗುರುಲಿಂಗಪ್ಪ ಮುಕ್ರಂಬಿ, ಶ್ರೀನಿವಾಸ ಕಠಾರೆ, ಮಂಜುನಾಥ ಸಿರಗಾಪೂರ, ಶಾಂತಪ್ಪ ಕಾರಭಾಸಗಿ,ಮಕ್ಬುಲ್ ಪಟೇಲ್,ವಲಿ ಅಹ್ಮದ್, ಮಲ್ಲಿನಾಥ ಸಂಗಶೆಟ್ಟಿ, ಬಾಬುರಾವ್ ಗಂವಾರ,ಹಾರಕೂಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.