ಗೆದ್ದ ನಂತರ ವರ್ಷದಲ್ಲಿ ಭರವಸೆ ಈಡೇರಿಸುವೆ: ರೆಡ್ಡಿ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.26: ಚುನಾವಣೆ ಗೆದ್ದು ಬಂದ ಕೇವಲ ಒಂದು ವರ್ಷದಲ್ಲಿ ಮನೆಗಳ ಹಕ್ಕು ಪತ್ರ ಸೇರಿದಂತೆ ವಿವಿಧ ಸೌಲಭ್ಯ ಸರ್ಕಾರದಿಂದ ನೀಡಲಾಗುವುದು ಎಂದು ಕೆ.ಆರ್.ಪಿ.ಪ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಭರವಸೆ ನೀಡಿದರು.
ಗಾಲಿ ಜನಾರ್ಧನ ರೆಡ್ಡಿಯವರ ನಡೆ ಗ್ರಾಮೀಣಾಭಿವೃದ್ಧಿ ಕಡೆ ಎನ್ನುವ ಶಿರೋನಾಮೆಯೊಂದಿಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಾದ ವಿಠಲಾಪುರ, ಹಂಪಸದುರ್ಗಾ,ಆಗೋಲಿ, ಸಿದ್ದಿಕೇರಿ, ಆನೆಗೊಂದಿ, ಸಂಗಾಪೂರ, ಮಲ್ಲಾಪುರ, ರಾಂಪುರ, ಲಕ್ಷ್ಮಿಪುರ, ಚಿಕ್ಕರಾಂಪುರ-1, ಚಿಕ್ಕರಾಂಪುರ-2, ರಂಗಾಪುರ(ಜಂಗ್ಲಿ), ರಂಗಾಪುರ ಕ್ಯಾಂಪ್, ತಿರುಮಲಾಪುರ, ಸಣಾಪುರ, ಕರಿಯಮ್ಮನಗಡ್ಡಿ, ವಿರುಪಾಪುರ ಗಡ್ಡಿ, ಗ್ರಾಮಕ್ಕೆ ಭೇಟಿ ನೀಡಿ  ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡುವ ಮೂಲಕ ಗ್ರಾಮದ ಅವಶ್ಯಕತೆಗಳು ಮತ್ತು ತೊಂದರೆಗಳನ್ನು ಅರಿತು ಅವುಗಳನ್ನು ಮುಂಬರುವ ದಿನಗಳಲ್ಲಿ ಶಾಶ್ವತ ಪರಿಹಾರ ನೀಡಲಾಗುವುದು. ಕ್ಷೇತ್ರದಲ್ಲಿ ಟೆಕ್ಸ್ ಟೈಲ್ ರೆಡಿ ಮೇಡ್ ಫ್ಯಾಕ್ಟರಿ ನಿರ್ಮಾಣ ಮಾಡಿ ಸಾವಿರಾರು ಮಹಿಳೆಯರು ಮತ್ತು ಪುರುಷರಿಗೆ ಉದ್ಯೋಗಾವಕಾಶಗಳನ್ನು ಹುಟ್ಟು ಹಾಕಲಾಗುವುದಾಗಿ ಎಂದು ಭರವಸೆ ನೀಡಿದರು.ಗಂಗಾವತಿ ಕ್ಷೇತ್ರದಿಂದ ನಾನು‌ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ಹನುಮನ ಅರ್ಶಿವಾದ ದೊಂದಿಗೆ ನಿಮ್ಮ ಅರ್ಶಿವಾದ ನೀಡುವ ಮೂಲಕ ನನ್ನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ. ಮುಂದಿನ ದಿನಗಳಲ್ಲಿ ಈ ಒಂದು ಧಾರ್ಮಿಕ ಕ್ಷೇತ್ರವನ್ನು 5 ವರ್ಷದಲ್ಲಿ 5 ಸಾವಿರ ಕೋಟಿ ರೂ ಗಳನ್ನು ಮೀಸಲಿಟ್ಟು ತಿರುಪತಿ ಮಾದರಿಯಲ್ಲಿ ದೇಶದ ಎಲ್ಲಾ ಮುಖ ಮಂತ್ರಿಗಳ ಬಳಿ ತೆರಳಿ  ಯಾತ್ರಿ ನಿವಾಸಗಳನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ತಾವೆಲ್ಲರೂ ಮುಂದಿನ ದಿನಗಳಲ್ಲಿ ಯಾವುದೇ ಸಹಾಯ ಬೇಡಿ ನನ್ನ ಮತ್ತು ಯಾರ ಬಳಿಯೂ ಹೋಗಿ ಕೈ ಎತ್ತಿ ಬೇಡ ಬಾರದು ಆ ರೀತಿಯಲ್ಲಿ ನೀವು ಆರ್ಥಿಕವಾಗಿ ಸಭಲರಾಗಬೇಕು. ಪ್ರತಿ ತಿಂಗಳ ಶನಿ ತ್ರಯೋದಶಿ ದಿನದಂದು ಈ ಕ್ಷೇತ್ರಕ್ಕೆ ಪ್ರಪಂಚದಿಂದ ಕೋಟ್ಯಾಂತರ ಜನರು ದರ್ಶನ ನೀಡುವ ಹಾಗೇ ಅಭಿವೃದ್ಧಿ ಮಾಡುತ್ತೇನೆ. ಯಾವುದೇ ರೀತಿಯಲ್ಲಿ ಈ ಭಾಗದ ಹಳ್ಳಿಗಳ ತೆರವುಗೊಳಿಸಲು ಅವಕಾಶ ನೀಡುವುದಿಲ್ಲ. ವಿಶೇಷವಾಗಿ ಈ ಭಾಗದ ಅರ್ಥಿಕ ವ್ಯವಸ್ಥೆ ಬಲಪಡಿಸಲು ಈ ಭಾಗದ ಎಲ್ಲಾ ಗ್ರಾಮಗಳಲ್ಲಿ ಹೋ ಸ್ಟೇ ಮತ್ತು ಅಧಿಕೃತವಾಗಿ ರೆಸಾರ್ಟ್ ಹಾಗೂ ರೆಸ್ಟೋರೆಂಟ್ ನಿರ್ಮಾಣಕ್ಕೆ ಲೈಸನ್ಸ್ ಕೊಡಿಸುವುದಕ್ಕೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.ಗಂಗಾವತಿ ಕ್ಷೇತ್ರದಿಂದ ನಾನು‌ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ಹನುಮನ ಅರ್ಶಿವಾದ ದೊಂದಿಗೆ ನಿಮ್ಮ ಅರ್ಶಿವಾದ ನೀಡುವ ಮೂಲಕ ನನ್ನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ. ಮುಂದಿನ ದಿನಗಳಲ್ಲಿ ಈ ಒಂದು ಧಾರ್ಮಿಕ ಕ್ಷೇತ್ರವನ್ನು 5 ವರ್ಷದಲ್ಲಿ 5 ಸಾವಿರ ಕೋಟಿ ರೂ ಗಳನ್ನು ಮೀಸಲಿಟ್ಟು ತಿರುಪತಿ ಮಾದರಿಯಲ್ಲಿ ದೇಶದ ಎಲ್ಲಾ ಮುಖ ಮಂತ್ರಿಗಳ ಬಳಿ ತೆರಳಿ  ಯಾತ್ರಿ ನಿವಾಸಗಳನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ತಾವೆಲ್ಲರೂ ಮುಂದಿನ ದಿನಗಳಲ್ಲಿ ಯಾವುದೇ ಸಹಾಯ ಬೇಡಿ ನನ್ನ ಮತ್ತು ಯಾರ ಬಳಿಯೂ ಹೋಗಿ ಕೈ ಎತ್ತಿ ಬೇಡ ಬಾರದು ಆ ರೀತಿಯಲ್ಲಿ ನೀವು ಆರ್ಥಿಕವಾಗಿ ಸಭಲರಾಗಬೇಕು. ಪ್ರತಿ ತಿಂಗಳ ಶನಿ ತ್ರಯೋದಶಿ ದಿನದಂದು ಈ ಕ್ಷೇತ್ರಕ್ಕೆ ಪ್ರಪಂಚದಿಂದ ಕೋಟ್ಯಾಂತರ ಜನರು ದರ್ಶನ ನೀಡುವ ಹಾಗೇ ಅಭಿವೃದ್ಧಿ ಮಾಡುತ್ತೇನೆ. ಯಾವುದೇ ರೀತಿಯಲ್ಲಿ ಈ ಭಾಗದ ಹಳ್ಳಿಗಳ ತೆರವುಗೊಳಿಸಲು ಅವಕಾಶ ನೀಡುವುದಿಲ್ಲ. ವಿಶೇಷವಾಗಿ ಈ ಭಾಗದ ಅರ್ಥಿಕ ವ್ಯವಸ್ಥೆ ಬಲಪಡಿಸಲು ಈ ಭಾಗದ ಎಲ್ಲಾ ಗ್ರಾಮಗಳಲ್ಲಿ ಹೋ ಸ್ಟೇ ಮತ್ತು ಅಧಿಕೃತವಾಗಿ ರೆಸಾರ್ಟ್ ಹಾಗೂ ರೆಸ್ಟೋರೆಂಟ್ ನಿರ್ಮಾಣಕ್ಕೆ ಲೈಸನ್ಸ್ ಕೊಡಿಸುವುದಕ್ಕೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ಕೆಲವರು ನಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ಚುನಾವಣೆ ಗೆದ್ದ ನಂತರ ಜನರಿಗೆ ನೀಡಿದ ಭರವಸೆಯನ್ನು ಚಾಚು ತಪ್ಪದೇ ಮಾಡಿಕೊಡುತ್ತೇನೆ ಎಂದರು. ನಂತರ ರೆಡ್ಡಿ ನೇತೃತ್ವದಲ್ಲಿ ನೂರಾರು ಯುವಕರು ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಪಕ್ಷದ ಜಿಲ್ಲಾ ಅಧ್ಯಕ್ಷ ಮನೋಹರಗೌಡ ಹೇರೂರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸುರೇಶ, ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷರು ಹಾಗೂ ಮುಖಂಡರು ಮತ್ತು ಅಪಾರ ಕಾರ್ಯಕರ್ತರು ಭಾಗವಹಿಸಿದ್ದರು