ಗೆದ್ದಿರೀ ಬಡವರ ಕಷ್ಟಕ್ಕೆ ಮರಗ್ರೀ: ಸಿದ್ದಲಿಂಗ ದೇವರು

ವಾಡಿ:ಜ.3: ಎಲ್ಲೆಕ್ಷನ್ ಇಲ್ಲದೇ ಸೇಲೆಕ್ಷನ್ ಆಗಿರಿ, ಈಗ ಬಡವರ ಕಷ್ಟಕ್ಕೆ ಮರಗ್ರೀ, ನಾಮಪತ್ರ ಹಿಂದೆ ತಗೊಂಡು ಸೋತವರ ಸಲಹೆ ಸ್ವೀಕಾರ ಮಾಡ್ರೀ, ಜಾತಿ-ಮತ ಪಂಥ-ಭೇದ ಮರೆತು ಶ್ರೇಷ್ಠ ಊರು ಮಾಡ್ರಿ ಎಂದು ಶ್ರೀಸಿದ್ದಲಿಂಗೇಶ್ವರ ಮಠದ ನೂತನ ಅಧ್ಯಕ್ಷ ಶ್ರೀಸಿದ್ದಲಿಂಗ ದೇವರು ಹೇಳಿದರು.

ಪಟ್ಟಣ ಸಮೀಪದ ರಾವೂರ ಗ್ರಾಮದ ಶ್ರೀಸಿದ್ದಲಿಂಗೇಶ್ವರ ಸಂಸ್ಥಾನ ಮಠದ ವತಿಯಿಂದ ದ್ವೀದಳ ಧಾನ್ಯ ಮಂಡಳಿಯ ನೂತನ ಅಧ್ಯಕ್ಷರಾದ ಲಿಂಗಾರೆಡ್ಡಿಗೌಡ ಬಾಸರೆಡ್ಡಿ ಹಾಗೂ ಗ್ರಾಮದ 32 ನೂತನ ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡುತ್ತಾ, ಎಲೆಕ್ಷನ್ ಬಂದರೆ ಸಾಕು ಮನಸ್ಸು ಛೀದ್ರ ಆಗುತ್ತವೆ. ಅತ್ತೆ-ಸೊಸೆ ಜಗಳ ಗ್ರಾಮದಲ್ಲಿ ರಾಜಕೀಯ ರಂಗಕ್ಕೆ ಮೆರಗು ನೀಡುತ್ತದೆ. ಆದ್ರೇ, ರಾವೂರಿನಲ್ಲಿ ಶಾಂತಿಯುತವಾಗಿ ಅವಿರೋಧ ಆಯ್ಕೆ ಮಾಡಿದ್ದು ಸಂತೋಷದಾಯಕವಾಗಿದೆ ಎಂದು ವಿವರಿಸಿದರು.

ಸನ್ಮಾನ ಸ್ವೀಕರಿಸಿ ತೊಗರಿ ಮಂಡಳಿ ಅಧ್ಯಕ್ಷ ಲಿಂಗರೆಡ್ಡಿಗೌಡ ಬಾಸರೆಡ್ಡಿ ಮಾತನಾಡಿ, ಭೌಗೋಳಿಕವಾಗಿ ತೋಗರಿ ನಾಡಾಗಿದ್ದು, ತೊಗರಿಯನ್ನು ಸಂಸ್ಕರಿಸಿ ಇಲ್ಲಿಯೇ ಬೆಳೆ ಮಾರಾಟ ಮಾಡುವ ಉದ್ದೇಶವನ್ನು ಹೊಂದಿದ್ದೆವೆ. ಇಲ್ಲಿಯ ತೊಗರಿಯನ್ನು ಶಾಲೆ, ಅಂಗನವಾಡಿಗೆ ಸ್ಪಲೈ ಮಾಡುವ ಉದ್ದೇಶ ಹೊಂದಿದ್ದೆವೆ ಎಂದು ಅಭಿಪ್ರಾಯಿಸಿದರು.

ಚಿತ್ತಾಪೂರ ತಾಲ್ಲೂಕಿನಲ್ಲಿಯೇ ರಾವೂರ ಗ್ರಾಪಂ ಅತೀ ಹೆಚ್ಚು 32 ಜನ ಸದಸ್ಯ ಬಲ ಹೊಂದಿದ್ದು, ಸರ್ವರು ಅವಿರೋಧ ಆಯ್ಕೆಯಾಗುವ ಮೂಲಕ ಪಂಚಾಯತ ಎಲೆಕ್ಷನಕ್ಕೆ ಮತದಾನವಿಲ್ಲದೆ 15 ವರ್ಷಗಳ ನಂತರ ಹೊಸ ಇತಿಹಾಸ ಬರೆದಂತಾಯಿತ್ತು ಎಂದು ಜಿ.ಪಂ ಸದಸ್ಯ ಅಶೋಕ ಸಗರ ಹೇಳಿದರು.

ಸನ್ಮಾನಿತ ಸದಸ್ಯರು: ಹಾಜೀಲಾಲ ಹುಸೇನಸಾಬ, ಚಂದ್ರಶೇಖರ ರಾಚಣ್ಣಾ, ಗಂಗಮ್ಮಾ ಭೀಮಾಶಂಕರ, ದೇವಕಿ ನಾರಾಯಣ, ನಾಗಪ್ಪ ಅಮರಪ್ಪಾ, ಸವಿತಾ ಸೂರ್ಯಕಾಂತ, ಸೀತಮ್ಮಾ ಗುರುಲಿಂಗಪ್ಪ, ಸುಲೋಚನಾ ಬೀರಪ್ಪಾ, ಸೌಭಾಗ್ಯ ಅಣವೀರಪ್ಪಾ, ಸುಮಿತ್ರಾ ಹೊನ್ನಪ್ಪಾ, ಯುನೂಸ್ ಪ್ಯಾರೇ, ಈಶ್ವರಪ್ಪ ಮಲ್ಕಪ್ಪ, ಶಾಂತಾಬಾಯಿ ಸೂರ್ಯಕಾಂತ, ಶಾಹೀದಾಬೇಗಂ ಮಹಮ್ಮದ ಹಾಜಿ, ರವಿಚಂದ್ರ ರಾಜೇಂದ್ರ, ಶ್ವೇತಾ ಧರ್ಮರಾಜ, ಭೀಮಣ್ಣ ದೇವಿಂದ್ರಪ್ಪ, ಶಿವಯೋಗಿ ರೇವಣಪ್ಪ, ಶಾಂತಮ್ಮಾ ದೌಲಪ್ಪ, ಹಣಮಂತ ಹೊನ್ನಪ್ಪಾ, ರಫೀಕ ಅಬ್ದುಲ ಅಜೀಜ್, ಸಿದ್ದಮ್ಮ ರವೀಂದ್ರ, ಗೋವಿಂದ ಕೃಷ್ಣಮೂರ್ತಿ, ಕೃಷ್ಣ ಮಲೇಶಪ್ಪಾ, ಜಯಶ್ರೀ ಸುರೇಶ, ತಿಮ್ಮಯ್ಯಾ ಯಂಕಪ್ಪಾ, ತಿಮ್ಮಯ್ಯಾ ಸೇಡಂ ಯಂಕಪ್ಪ, ವಿಜಯಲಕ್ಷ್ಮೀ ಭಾಗರಾಜ, ಶಾಂತಾ ಈರಣ್ಣಾ, ಮೀನಾಕ್ಷಿ ಯುವರಾಜ ರಾಠೋಡ, ವೆಂಕಟೇಶ ಜಗನ್ನಾಥ, ವಿಕಾಸ ಧಾವಜೀ ಸನ್ಮಾನಿತರು.

ಮಠದ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಎಸ್‍ಎಸ್‍ಎನ್ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಚೆನ್ನಣ್ಣ ಬಾಳಿ, ಮುಖಂಡರಾದ ಶಿವಲಿಂಗಪ್ಪ ವಾಡೇದ, ಗುರುನಾಥ ಗುದ್ದಗಲ್, ತಿಪ್ಪಣ್ಣ ವಗ್ಗರ್, ಅಣ್ಣರಾವ ಬಾಳಿ, ಕೈಲಾಸ ಚವ್ಹಾಣ, ಸಾಹೇಬಗೌಡ ತಳವಾರ, ಮಶಾಕಸೇಠ, ರಾಮಚಂದ್ರ ರಾಠೋಡ, ತಿಪ್ಪಣ್ಣ ವಗ್ಗರ, ರವಿ ನಡುವಿನಕೇರಿ, ಅಮೀರ ಮುಸಾವಾಲೇ, ದೇವಿಂದ್ರ ತಳವಾರ, ಪರಶುರಾಮ ತುನ್ನೂರ, ಮಾಳಪ್ಪಾ ಕೊಳ್ಳಿ, ರಾಮಚಂದ್ರ ರಾಠೋಡ, ವೆಂಕಟೇಶ ಪೂಜಾರಿ, ಹಸನಪಟೇಲ್ ಮುಷ್ಟೂರ್, ಬಸವರಾಜ ಮಡ್ಡಿ, ಈಶ್ವರ ಅಳ್ಳೋಳ್ಳಿ, ಮೊಹನ ಸೂರೆ, ಈಶ್ವರ ಬಾಳಿ, ರಾಮಚಂದ್ರ ನಾಯಕ, ರಾಮಚಂದ್ರ ಪಂಚಾಳ, ಮಹಿಬೂಬ ಮಾಸುಲ್ದಾರ್, ಚಂದ್ರಕಾಂತ ಗುದ್ದಗಲ ಸೇರಿದಂತೆ ಅನೇಕರು ಇದ್ದರು, ಯುವಮುಖಂಡ ಶರಣು ಜೋತ್ಯಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಿಸಿ, ವಂದಿಸಿದರು.