ಗೆದ್ದಲು ಹಿಡಿದು ಕಸದ ತೊಟ್ಟಿ ಸೇರಿದ ಲೈಬ್ರರಿ ಪುಸ್ತಕಗಳು

ನಂಜನಗೂಡು: ಜು.17:- ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾಚನಾಲಯದ ಪುಸ್ತಕಗಳಿಗೆ ಗೆದ್ದಲು ಹಿಡಿದಿದೆ.ಸಿಕ್ಕಿಬೀಳುವ ಭೀತಿಯಿಂದ ಪುಸ್ತಕಗಳನ್ನ ಕಸದ ತೊಟ್ಟಿಗೆ ಎಸೆಯಲಾಗಿದೆ.
ಶತಮಾನ ಕಂಡ ಕಾಲೇಜಿನ ವಾಚನಾಲಯದ ಬೇಜವಾಬ್ದಾರಿ ನಿರ್ವಹಣೆಗೆ ಕನ್ನಡಿ ಹಿಡಿದಂತಿದೆ ಪುಸ್ತಕಗಳ ದುಃಸ್ಥಿತಿ.
ಮಾಹಿತಿ ಪ್ರಕಾರ ಎಲ್ಲೂ ಸಿಗದ ಅಪೂರ್ವ ಪುಸ್ತಕಗಳು ಈ ಜ್ಞಾನ ಭಂಡಾರದಲ್ಲಿದೆ. 1970 ರ ದಶಕದಿಂದಲೂ ಪುಸ್ತಕಗಳನ್ನ ಸಂಗ್ರಹಿಸಲಾಗಿದೆ.
ಸುಮಾರು 20 ಸಾವಿರ ಪುಸ್ತಕಗಳು ಇಲ್ಲಿದೆ. ಶತಮಾನದ ಹಿಂದೆ ಮೈಸೂರು ವಿ.ವಿ.ಗೆ ಬೆಂಗಾವಲಾಗಿ ಪ್ರಾರಂಭಿಸಲಾದ ಕಾಲೇಜು ಎಂಬ ಹೆಗ್ಗಳಿಕೆಯೂ ಇದಕ್ಕೆ ಇದೆ. ಈ ಹಿಂದೆ ಅತ್ಯುತ್ತಮ ವಾಚನಾಲಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.ಇಂತಹ ಅಪೂರ್ವ ಪುಸ್ತಕಗಳಿಗೆ ಗೆದ್ದಲು ಹಿಡಿದಿದೆ.ಸೂಕ್ತ ನಿರ್ವಹಣೆ ಇಲ್ಲದ ಕಾರಣ ಪುಸ್ತಕಗಳು ಅಳಿವಿನ ಅಂಚು ತಲುಪಿದೆ.
ಹಿರಿಯ ಅಧಿಕಾರಿಗಳ ಕೈಗೆ ಸಿಕ್ಕಿಬೀಳುವ ಭಯದಿಂದ ಸಿಬ್ಬಂದಿಗಳು ರಾತ್ರೋ ರಾತ್ರಿ ಪುಸ್ತಕಗಳನ್ನ ಕಸದ ತೊಟ್ಟಿಗೆ ಎಸೆದಿದ್ದಾರೆ. ಸಂಭಂಧ ಪಟ್ಟ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಮತ್ತು ಸಿಬ್ಬಂದಿಗಳು ಎಚ್ಚೆತ್ತುಕೊಂಡು ವಾಚನಾಲಯವನ್ನ ರಕ್ಷಿಸಬೇಕಿದೆ. ಅಪೂರ್ವ ಜ್ಞಾನ ಭಂಢಾರ ಸಂರಕ್ಷಿಸಬೇಕಿದೆ.
ಶತಮಾನದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಾಚನಾಲಯಕ್ಕೆ ಭೇಟಿ ನೀಡಿ ಕುಲಂಕುಶವಾಗಿ ಪರಿಶೀಲನೆ ಮಾಡಿ ತಪ್ಪಿತಸ್ಥರಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಕ್ಷೇತ್ರ ಶಿಕ್ಷಣಾಧಿಕಾರಿ ನಂಜನಗೂಡು ರಾಜು ತಿಳಿಸಿದರು.