ಗೆದ್ದರೆ ಬೀಗಲ್ಲ ಸೋತರೆ ಕೂರಲ್ಲ, ಅಭಿವೃದ್ಧಿಗೆ ಮೋದಿ ಪಣ


ನವದೆಹಲಿ, ನ 11- ಗದ್ದೇ ಎಂದು ಬೀಗಲ್ಲ. ಸೋತರೆ ಸುಮ್ಮನೆ ಕೂರುವುದಿಲ್ಲ. ಜನರಿಗಾಗಿ ಮುನ್ನಡೆಯುತ್ತೇವೆ. ದೇಶ ನಿರ್ಮಾಣ, ಆತ್ಮನಿರ್ಭರತೆಗಾಗಿ ಮುನ್ನಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ‌
ಬಿಹಾರ ವಿಧಾನಸಭೆ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಉಪ‌ಸಮರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕಚೇಯಲ್ಲಿ ಇಂದು ವಿಜಯೋತ್ಸವ ಆಚರಿಸಲಾಯಿತು.
ಮತದಾರರಿಗೆ ಧನ್ಯವಾದ ಅರ್ಪಿಸಿ ಮಾತನಾಡಿದ ನರೇಂದ್ರ ಮೋದಿ, ಸದಾ ಮಧ್ಯಮ ವರ್ಗದ ಜನರ ಸಂಕಷ್ಟಕ್ಕೆ ಸ್ಪಂದಿಸುವುದಾಗಿ ಹೇಳಿದರು.
ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಅದೇ ರೀತಿ ಸೋಲು ಗೆಲುವುಗಳು ಸಾಮಾನ್ಯ. ಆದರೆ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯವುದು ಮುಖ್ಯ ಎಂದು ಹೇಳಿದರು.
ಪಕ್ಚದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ನೇತೃತ್ವದಲ್ಲಿ ಪಕ್ಷಕ್ಕೆ ಗೆಲುವು ಸಿಗುತ್ತಿದೆ. ಕರ್ನಾಟಕ, ಗುಜರಾತ್, ಮಣಿಪುರ ಸೇರಿದಂತೆ ದೇಶದಲ್ಲಿ ಗೆಲುವು ಸಿಗುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಅಭಿವೃದ್ಧಿ ಪರ ನಿಲ್ಲುತ್ತದೆ ಎಂದು ಸಾರಿದರು.
ಮಾರಕ ಕೊರೊನಾ ನಡುವೆ ಬಿಹಾರ ಮತ ದೇಶದ ವಿವಿಧೆಡೆ ಉಪಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ ಚುನಾವಣಾ ಆಯೋಗಕ್ಕೆ ಮೋದಿ ಅಭಿನಂದನೆ ಸಲ್ಲಿಸಿದರು.