ಗೆಜ್ಜಲಗೆರೆಯ ಮನ್‍ಮುಲ್‍ಗೆ ಸಚಿವ ಸೋಮಶೇಖರ್ ಭೇಟಿ

ಮದ್ದೂರು: ಜೂ.10: ತಾಲ್ಲೂಕಿನ ಗೆಜ್ಜಲಗೆರೆಯ ಮನ್‍ಮುಲ್‍ನಲ್ಲಿ ಹಾಲಿಗೆ ನೀರು ಕಲಬೆರೆಕೆ ಪ್ರಕರಣಕ್ಕೆ ಸಂಬಂಧ ತನಿಖೆ ನಡೆಸುತ್ತಿರುವ ಮದ್ದೂರು ಪೆÇಲೀಸ್ ಠಾಣೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಇಂದು ಭೇಟಿ ನೀಡಿ ಪರಿಶೀಲಿಸಿದರು.
ಟ್ಯಾಂಕರ್ ಅನ್ನು ಹೇಗೆ ವಿನ್ಯಾಸಗೊಳಿಸಿದ್ದರು, ಹಾಲಿಗೆ ಹೇಗೆ ನೀರು ಮಿಶ್ರಣ ಮಾಡುತ್ತಿದ್ದರು ಎಂಬ ಬಗ್ಗೆ ಸಚಿವರಿಗೆ ಮನ್‍ಮುಲ್ ಅಧ್ಯಕ್ಷ ರಾಮಚಂದ್ರು ವಿವರಿಸಿದರು. ಈ ವೇಳೆ ತನಿಖೆ ಎಲ್ಲಿವರೆಗೆ ಬಂತು, ಯಾರ ಯಾರನ್ನು ಬಂಧಿಸಲಾಗಿದೆ. ಟ್ಯಾಂಕರ್‍ಗೆ ಯಾವ ವರ್ಕ್ ಶಾಪ್‍ನಲ್ಲಿ ವಿನ್ಯಾಸ ಮಾಡುತ್ತಿದ್ದರು ಎಂಬ ಬಗೆಗೆ ಪೆÇಲೀಸರನ್ನು ಪ್ರಶ್ನಿಸಿ ಸಚಿವರು ಉತ್ತರ ಪಡೆದರು.
ಎಎಸ್‍ಪಿ ಧನಂಜಯ್ಯ, ಯಾವ ವರ್ಕ್ ಶಾಪ್‍ನಲ್ಲಿ ವಿನ್ಯಾಸ ಮಾಡುತ್ತಿದ್ದರು ಎಂಬ ಬಗ್ಗೆ ಗೊತ್ತಿಲ್ಲ ಸರ್. ಪ್ರಕರಣ ಸಂಬಂಧ ಒಬ್ಬರನ್ನು ಬಂಧಿಸಲಾಗಿದೆ. ಐದು ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದವನು ನಾಪತ್ತೆಯಾಗಿದ್ದಾನೆ ಎಂದು ತಿಳಿಸಿದರು.