ಗೃಹ ಸಚಿವ ಡಾ. ಜಿ ಪರಮೇಶ್ವರ್ ಬಗ್ಗೆ ಹಗುರವಾಗಿ ಮಾತನ್ನಾಡಿರುವ ಮಾಜಿ ಶಾಸಕ ಪಿ ರಾಜೀವ್ ಕ್ಷಮೆಗೆ ಆಗ್ರಹ

ಇಂಡಿ :ಮೇ.27: ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಬಗ್ಗೆ ಹಗುರವಾಗಿ ಮಾತನ್ನಾಡಿರುವ ಮಾಜಿ ಶಾಸಕ ಪಿ ರಾಜೀವ್ ಕ್ಷೇಮೆಯಾಚಿಸಬೇಕೆಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಒತ್ತಾಯ ಮಾಡುತ್ತದೆ ಎಂದು ಕಲ್ಬುರ್ಗಿಸಂಚಾಲಕ ಸಂಜು ಕುಮಾರ್ ಜನ್ನಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಅಸಮರ್ಥ ಸಚಿವ ಎಂದು ಅತ್ಯಂತ ಹಗುರವಾಗಿ ಮಾತಾಡಿದ್ದು, ಅದು ಅವರಿಗೆ ಶೋಭೆ ತರುವಂತದ್ದು ಅಲ್ಲ. ಆದರೆ ಸಮರ್ಥ ನಾಯಕತ್ವ ಅಂದರೆ ಹೇಗಿರಬೇಕು..? ಬಿಜೆಪಿಯ ರೆಡ್ಡಿಯ ಬಳಗದಂತೆ ತೋಳು ಏರಿಸಿಕುಸ್ತಿ ಮಾಡಬೇಕೆ..?
ನಿಮ್ಮ ಸಮರ್ಥ ನಾಯಕತ್ವದ ಬಗ್ಗೆ ಕುಡಚಿ ಕ್ಷೇತ್ರದ ಜನತೆ ಉತ್ತರ ನೀಡಿದ್ದಾರಾಲ್ವಾ..! ಎಂದು ಪ್ರಶ್ನೆ ಮಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಸಿದ್ಧಾಂತದಡಿಯಲ್ಲಿ ಕೆಲಸ ಮಾಡುತ್ತಿರುವ ಜಿ ಪರಮೇಶ್ವರ್ ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಅದಲ್ಲದೇ ಪೆÇಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ಅನುಭವ ಇದ್ದವರು. ನಿಮಗೆ ನಿಮ್ಮ ಬಿಜೆಪಿ ಪಕ್ಷ ಗೃಹ ಸಚಿವರನ್ನಾಗಿ ಮಾಡಬೇಕಿತ್ತು ಅಲ್ಲವೇ..! ಆದರೆ ಈಗ ಸೋತು ಸುಣ್ಣವಾಗಿರುವ ತಾವು ಬಿಜೆಪಿ ನಾಯಕರನ್ನು ಮೆಚ್ಚಿಸಲು, ಪ್ರಚಾರಗೊಸ್ಕರ ಮಾಧ್ಯಮಗಳ ಮುಂದೆ ಸುಖಾಸುಮ್ನೆ ಅನ್ಯತಾ ಆಪಾದನೆ ಮಾಡುತ್ತಿರುವುದು
ಒಳ್ಳೆಯದಲ್ಲ..! ಟೀಕಿಸಿದ್ದು ನಿಮ್ಮ ಘನತೆ ಹೆಚ್ಚುತ್ತದೆ ಅನ್ನೋ ಭ್ರಮೆಯಲ್ಲಿ ಇರುವ ನೀವು ಗೃಹ ಸಚಿವರಿಗೆ ಕ್ಷಮೆಯಾಚನೆ ಮಾಡಬೇಕೆಂದು ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.