ಕೋಲಾರ,ಜು,೨೯-ರಾಜ್ಯ ಸರ್ಕಾರವು ಜಾರಿ ಮಾಡಿರುವ ಗ್ಯಾರೆಂಟಿ ಯೋಜನೆಯಲ್ಲಿ ಮಹಿಳೆಯರ ಕಣ್ಣು ಈಗಾ ಗೃಹ ಲಕ್ಷ್ಮಿಯ ಕಡೆ ತಿರುಗಿದೆ. ಕಳೆದ ೪-೫ ದಿನಗಳಿಂದ ಕರ್ನಾಟಕ ಓನ್, ಗ್ರಾಮ ಓನ್. ಬೆಂಗಳೂರು ಓನ್ ಸೇವಾ ಕೇಂದ್ರಗಳ ಬಳಿ ನೊಂದಣಿಗಾಗಿ ಮನೆಯ ಯಾಜಮಾನಿಯರು ಬೆಳ್ಳಂಬೆಳಿಗ್ಗೆಯೇ ಹೋಗಿ ಕಾಯುವಂತ ಪರಿಸ್ಥಿತಿ ಉಂಟು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧನ ಉಂಟು ಮಾಡಿದೆ.
ನಗರದ ಮಿನಿ ವಿಧಾನಸೌದದ ಪಕ್ಕದಲ್ಲಿ ಕರ್ನಾಟಕ ಓನ್ ಸೇವಾ ಕೇಂದ್ರದಲ್ಲಿ ಗೇಟ್ ತೆರೆಯುವ ಮುನ್ನವೇ ಬೆಳಿಗ್ಗೆ ೫ ಗಂಟೆಗೆ ಗಟ್ಟಿಮುಟ್ಟಾಗಿರುವ ಮಹಿಳೆಯರು ಗೇಟ್‌ನ್ನು ಹಾರಿ ನೊಂದಣಿ ಕೊಠಡಿ ಬಾಗಿಲ ಬಳಿ ಸರದಿಯಲ್ಲಿ ನಿಲ್ಲುವುದು ಕಂಡು ಬರುತ್ತಿರುವುದು ಕಂಡರೆ ಮಹಿಳೆಯರು ಯಾವೂದೇ ಪುರಷರಿಗಿಂತ ಕಡಿಮೆ ಇಲ್ಲ ಎಂಬುವುದನ್ನು ಗ್ಯಾರೆಂಟಿ ಯೋಜನೆಗಳೇ ನಿದರ್ಶನವಾಗಿದೆ. .
ಇಷ್ಟು ದಿವಸ ಮಹಿಳಾ ಶಕ್ತಿಯ ಉಚಿತ ಪ್ರಯಾಣಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ ಕಿಟಕಿ ಮೂಲಕ ಹಾರಿದಂತೆ ಸೇವಾ ಕೇಂದ್ರಗಳ ಗೇಟ್‌ಗಳನ್ನು ಹಾರಿ ನೊಂದಣಿ ಮಾಡಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸೇವಾ ಕೇಂದ್ರಗಳಲ್ಲಿ ಬೆಳಿಗ್ಗೆ ೯,೩೦ಕ್ಕೆ ನೊಂದಣಿ ಸಿಬ್ಬಂದಿಗಳು ಅಗಮಿಸುತ್ತಾರೆ ಅದರೆ ೪-೫ ಗಂಟೆಗಳ ಮುಂಚೆಯೇ ಹೋಗಿ ಸರದಿಯಲ್ಲಿ ನಿಂತಿರುವುದು ಕಂಡು ಬರುತ್ತಿದೆ. ಮಹಿಳೆರ ಮನೆಯಿಂದ ಬೆಳಿಗ್ಗೆ ಟಿಫಾನ್ ಅವರು ಇರುವ ಸ್ಥಳಕ್ಕೆ ಬರುತ್ತದೆ. ನೀರು ಸಹ ಸರಬರಾಜು ಅಗುತ್ತದೆ, ನೋಂದಣಿಗೆ ಅಗತ್ಯವಾದ ಅಧಾರ್ ಕಾರ್ಡ, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್‌ಗಳ ಜೆರಾಕ್ಸ್ ಪ್ರತಿಗಳು ಹಾಗೂ ಅಸಲಿ ದಾಖಲೆಗಳನ್ನು ಸಿದ್ದಪಡೆಸಿ ಕೊಂಡು ಹೋಗಿರುತ್ತಾರೆ.
ಕಚೇರಿಯು ತೆರೆದ ನಂತರ ನೊಂದಣಿಯನ್ನು ಕ್ರಮ ಸಂಖ್ಯೆಯ ಪ್ರಕರ ನೊಂದಣೀ ಕೊಠಡಿಯೊಳಗೆ ಬಿಡಲಾಗುತ್ತಿದೆ. ಸಿಬ್ಬಂದಿಗಳು ಸಮರ್ಪಕವಾದ ದಾಖಲೆಗಳನ್ನು ಪರಿಶೀಲಿಸಿ ನೋಂದಾಯಿಸಿ ಕೊಂಡು ಸ್ವೀಕೃತಿ ಕಳುಹಿಸುತ್ತಿದ್ದಾರೆ. ಇದಕ್ಕೆ ಮೊದಲು ಟೋಕನ್ ವ್ಯವಸ್ಥೆಗಳಿತ್ತು. ಅದರೆ ಅದು ಸರಿಬಾರದ ಕಾರಣ ಈಗಾ ಮಹಿಳೇಯೇ ಸರದಿಯಲ್ಲಿ ನಿಂತು ನೋಂದಣಿ ಮಾಡಿಸಿ ಕೊಳ್ಳ ಬೇಕಾಗಿರುವುದು.
ಮನೆಯಲ್ಲಿ ದುಡಿಯುವ ಗಂಡಸರು, ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ಮನೆಯ ಯಾಜಮಾನಿ ಬೆಳಗ್ಗೆಯೇ ಹೊರಗೆ ಹೋಗಿರುವುದರಿಂದ ತೊಂದರೆಯಾಗುತ್ತಿದೆ ಎಂಬ ದೂರುಗಳು ಈಗಾಗಲೇ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಕೆಲವು ಮಹಿಳೆಯರು ತಮ್ಮ ಸಣ್ಣ ಪುಟ್ಟ ಮಕ್ಕಳೊಂದಿಗೆ ಸೇವಾ ಕೇಂದ್ರದ ಮುಂದೆ ಸರದಿಯಲ್ಲಿ ನಿಂತಿರುವುದು ಕಂಡರೆ ಇದು ಯಾವೂದೋ ಗ್ರಾಹಚಾರ ಎಂದು ಟೀಕೆಗಳು ಕೇಳಿ ಬರುತ್ತಿದೆ.
ಕೋಲಾರ ನಗರದಲ್ಲಿ ಮಿನಿ ವಿಧಾನಸೌಧ ಪಕ್ಕದಲ್ಲಿನ ಕರ್ನಾಟಕ ನಂಬರ್ ಒನ್, ಬಸ್ ಸ್ಟಾಂಡ್ ರಸ್ತೆಯ ಕಾಳಿಕಾಂಭ ದೇವಾಲಯ ಸಮೀಪದ ಕಮಲಮಹಡಿ ಪ್ರಾಥಮಿಕ ಶಾಲೆ ಹಾಗು ಕೀಲು ಕೋಟೆ ರಸ್ತೆಯಲ್ಲಿನ ಪದವಿ ಪೂರ್ವ ಶಾಲೆಯಲ್ಲಿ ನೋಂದಣಿ ಮಾಡಲಾಗುತ್ತಿದ್ದು ಈ ಭಾಗದಲ್ಲಿ ಬೆಳಗಿನ ವೇಳೆ ನಗರದ ಮಹಿಳೆಯರು ಸರದಿ ಸಾಲುಗಟ್ಟಿ ನಿಂತಿರುವುದು ಕಾಣ ಬಹುದಾಗಿದೆ. ದಿನ, ದಿನೇ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಸಂಬಂಧ ಇಲಾಖೆಯು ಸರ್ಕಾರದ ಗಮನಕ್ಕೆ ತಂದು ಪಯಾರ್ಯವ್ಯವಸ್ಥೆಗಳನ್ನು ಮಾಡುವುದು ಸೊಕ್ತವೆಂದ ಸಾರ್ವಜನಿಕರು ಮಾದ್ಯಮಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡೆಸುತ್ತಿದ್ದಾರೆ.