ಗೃಹ ಲಕ್ಷ್ಮೀ ಯೋಜನೆ ಕಾರ್ಯಕ್ರಮ ವಿಕ್ಷಿಸಿದ ಫಲಾನುಭವಿಗಳು

ಚಿಂಚೋಳಿ,ಆ.31- ರಾಜ್ಯ ಕಾಂಗ್ರೆಸ್ ಸರಕಾರದ ಬಹು ನಿರೀಕ್ಷಿತ ಗೃಹ ಲಕ್ಷ್ಮಿ ಯೋಜನೆಗೆ ರಾಜ್ಯ ಮಟ್ಟದಲ್ಲಿ ಚಾಲನೆ ನೀಡಲಾಗಿದ್ದು, ಚಿಂಚೋಳಿ ಪಟ್ಟಣದ ಶ್ರೀ ಹರಾಕೂಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಗೃಹ ಲಕ್ಷ್ಮಿ ಯೋಜನೆಯ ಚಾಲನೆಯ ಕಾರ್ಯಕ್ರಮವನ್ನು ಫಲಾನುಭವಿಗಳು ವೀಕ್ಷಣೆ ಮಾಡಿದರು.
ಜಿಲ್ಲಾಡಳಿತ, ತಾಲೂಕಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪುರಸಭೆ ಇಲಾಖೆ ಆಶ್ರಯದಲ್ಲಿಆಯೋಜಿಸಿದ ಈ ಕಾರ್ಯಕ್ರಮವು ನೂರರ ಸಂಖ್ಯೆಯ ಗೃಹ ಲಕ್ಷ್ಮಿಯರು ಪಾಲ್ಗೊಂಡು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ್, ತಹಸೀಲ್ದಾರ್ ಸಾಬಣ್ಣ ಜಮಖಂಡಿ, ಸಿಡಿಪಿಒ ಗುರುಪ್ರಸಾದ, ಪುರಸಭೆ ಮುಖ್ಯಧಿಕಾರಿ ಕಾಶೀನಾಥ್ ಧನ್ನಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಆನಂದ್ ಟೈಗರ್, ಮತ್ತು ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಅನೇಕ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು