ಗೃಹ ಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಿದ ಶಾಸಕ ಶರಣಗೌಡ ಕಂದಕೂರ

ಗುರುಮಠಕಲ್:ಆ.31: ಗೃಹ ಲಕ್ಷ್ಮಿ ಯೋಜನೆಯು ಅತ್ಯಂತ ದೊಡ್ಡ ಯೋಜನೆ ಇದಾಗಿದ್ದು ಸರಕಾರ ದಿಂದ ಕೊಡುವ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿತಿಂಗಳು ಅವರ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂಪಾಯಿ ಹಾಕುವುದು ಇದು ಸಣ್ಣ ಮೊತ್ತವಲ್ಲ. ಇದನ್ನು ಮಾತೆಯರು ತಮ್ಮ ಸಂಸಾರದ ಸಣ್ಣ ಪುಟ್ಟ ಖರ್ಚುಗಳಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ಹೇಳಿದರು. ಪಟ್ಟಣದ ಹೀರಾಗಾರ್ಡನ್ ಹಾಲ್ ನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕರು ಇನ್ನು ನಮ್ಮ ಕ್ಷೇತ್ರದ ಜನರು ನೋಂದಣಿ ಮಾಡಿಸಲು ಮಂದಗತಿಯಲ್ಲಿ ಸಾಗುತ್ತಿದ್ದಾರೆ. ಮುಖ್ಯವಾಗಿ ಬಡವರಿಗೆ ಈ ಯೋಜನೆಯ ಲಾಭ ಪಡೆಯಲು ಸಂಬಂಧ ಪಟ್ಟ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವಲ್ಲಿ ತಾವು ಮುಂದಾಳತ್ವ ವಹಿಸಿ ಈ ಯೋಜನೆಯ ಯಶಸ್ವಿಗೆ ಸಹಕಾರ ನೀಡಬೇಕು ಎಂದರು ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ತಹಸಿಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು ಮೊಹಮ್ಮದ್ ಮೊಹಸೀನ್ ಅಹಮದ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶ್ರೀ ಮನ್ ನಿರಂಜನ ಪ್ರಣವ ಸ್ವರುಪಿ ಶಾಂತವೀರ ಗುರು ಮುರುಘರಾಜೇಂದ್ರ ಮಹಾ ಸ್ವಾಮಿಗಳು ಸಂಸ್ಥಾನ ಖಾಸಮಠ ಗುರುಮಠಕಲ್ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ವೇಳೆ ಮುಖ್ಯ ಯೋಜನಾಧಿಕಾರಿಗಳು ಜಿಲ್ಲಾ ಪಂಚಾಯತ್ ಯಾದಗಿರಿ ಹಾಗೂ ಗೃಹ ಲಕ್ಷ್ಮಿ ಯೋಜನೆಯ ತಾಲೂಕು ನೊಡಲ್ ಅಧಿಕಾರಿ ಗುರುನಾಥ ಗೌಡಪ್ಪ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಾಮಸುಂದರ್ ಕಾದ್ರೊಳ್ಳಿ. ಪುರಸಭೆ ಮುಖ್ಯಾಧಿಕಾರಿ ಶ್ರೀ ಮತಿ ಭಾರತಿ ಎಸ್ ದಂಡೋತಿ.ಜಿ ತಮ್ಮಣ್ಣ .ಪಾಪಣ್ಣ ಮನ್ನೆ. ಶರಣು ಆವುಂಟಿ. ನವಾಜರೆಡ್ಡಿ ಪೆÇೀಲಿಸ್ ಪಾಟೀಲ್.ಆಶನ್ನ ಬುದ್ದ.ಶಿರಾಜ್. ನರಸಪ್ಪ ಗಡ್ಡಲ್. ಬಾಲು ದಾಸರಿ. ಬಸಣ್ಣ ದೇವರಹಳ್ಳಿ. ಹಾಗೂ ಇತರರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.