(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.22: ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ನೊಂದಾಯಿಸಿಕೊಳ್ಳಲು 345125 ಫಲಾನುಭವಿಗಳು ಅರ್ಹರಿದ್ದು. ನಿನ್ನೆವರೆಗೆ 3866 ಜನರು ನೊಂದಾಯಿಸಿಕೊಂಡಿದ್ದಾರೆ. 336 ನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಎಸ್ಟಿ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರು ತಿಳಿಸಿದ್ದಾರೆ.
ನಗರದಲ್ಲಿನ ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು.
ಚುನಾವಣೆ ಸಂದರ್ಭದಲ್ಲಿ ನೀಡಿದ ಐದು ಗ್ಯಾರೆಂಟಿಗಳ ಪೈಕಿ ಈಗಾಗಲೇ ಶಕ್ತಿ ಯೋಜನೆ, 10 ಕಿಲೋ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೆ ಬಂದಿದೆ. ಗೃಹ ಜ್ಯೋತಿ ಯೋಜನೆ ನೋಂದಣಿ ಪ್ರಕ್ರಿಯೆ ನಡೆದಿದೆ. ಇನ್ನು ಪ್ರತಿ ಕುಟುಂಬದ ಮುಖ್ಯಸ್ಥೆ ಮಹಿಳೆಗೆ ಮಾಸಿಕ ಎರೆಡು ಸಾವಿರ ರೂ ನೀಡುವ
ಗೃಹಲಕ್ಷ್ಮಿ ಯೋಜನೆಗೆ ಜು 19 ರಿಂದ ಆರಂಭಗೊಂಡಿದೆ. ಆ 15 ರಂದು ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ.
ನೋಂದಣಿಗೆ ಯಾವುದೇ ಶುಲ್ಕ ಇದೆ. ಕೇಳಿದರೆ ದೂರು ನೀಡಿ ಎಂದಿದ್ದಾರೆ. ನೋಂದಣಿ ಮಾಡುವ ಒನ್ ಕೇಂದ್ರಗಳಿಗೆ ಸರ್ಕಾರ 12 ರೂ ನೀಡುತ್ತಿದೆ. ಹಣದ ಬಗ್ಗೆ ಬಾದನಹಟ್ಟಿ ಸೇರಿದಂತೆ ಹಲವಡೆ ದೂರು ಆ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆಂದರು.
ಮಹಿಳಾ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್ ಇದ್ದರು.