ಗೃಹ ರಕ್ಷಕ ದಳ ದಿನಾಚರಣೆ

ಇಂಡಿ :ಜ.2:ಪೆÇಲೀಸ್ ಶಕ್ತಿಯೇ ಗ್ರಹರಕ್ಷಕ ದಳ.ಪ್ರಾಮಾಣಿಕತೆಯಿಂದ ಸೇವೆ ಮಾಡುವ ಮನಸ್ಸಿದ್ದರೆ ಗ್ರಹರಕ್ಷಕದಳ,ಪೆÇಲೀಸ್ ಇಲಾಖೆಯೆ ಇರಲಿ ಸಾರ್ವಜನಿಕರು ಗುರುತಿಸಿ,ಗೌರವಿಸುತ್ತಾರೆ.ಧರಿಸುವ ಸಮವಸ್ತ್ರಕ್ಕೆ ಗೌರವ ತರುವ ಹಾಗೆ ಕರ್ತವ್ಯ ನಿರ್ವಹಿಸಬೇಕು ಎಂದು ಸಿಪಿಐ ರಾಜಶೇಖರ ಬಡದೇಸಾರ ಹೇಳಿದರು.

ಅವರು ಗುರುವಾರ ಪಟ್ಟಣದ ಡಿವೈಎಸ್ಪಿ ಕಚೇರಿ ಸಭಾ ಭವನದಲ್ಲಿ ಗ್ರಹರಕ್ಷಕದಳ ವತಿಯಿಂದ ಹಮ್ಮಿಕೊಂಡ ಅಖಿಲಭಾರತ ಗ್ರಹರಕ್ಷಕದಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಾರ್ವಜನಿಕ ರಂಗದಲ್ಲಿ ಸೇವೆ ಸಲ್ಲಿಸುವುದು ಅತ್ಯಂತ ಪುಣ್ಯದ ಕೆಲಸ .ಪೊಲೀಸ್ ಗೃಹರಕ್ಷಕದಳ ಎರಡೂ ಅವಿಭಾಜ್ಯ ಅಂಗವಿದ್ದಂತೆ .ಕೋವಿಡ್ ಹಿನ್ನಲೆಯಲ್ಲಿ ಲಾಕ್‍ಡೌನ್ ಸಮಯದಲ್ಲಿ ಪೆÇಲೀಸ್ ಸಿಬ್ಬಂದಿಗೆ ಜೊತೆಗೆ ಗ್ರಹರಕ್ಷಕರು ಸಹ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.

ಗೃಹರಕ್ಷದಳ ,ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಸಮಾಜದಲ್ಲಿ ಶಾಂತತೆ ಕಾಡುವುದರ ಜೊತೆಗೆ,ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟಹಾಕಲು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರ ರಕ್ಷಣೆಯೇ ಇಬ್ಬರ ಕರ್ತವ್ಯ ಇದರಲ್ಲಿ ಯಾವುದೇ ಕೀಳರಿಮೆ ಬೇಡ . ಉದ್ಯೋಗದಲ್ಲಿ ನಿಷ್ಠೆಯನ್ನು ಕಾಪಾಡಿಕೊಂಡು ಬರಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಮಾತನಾಡಿ,ರಕ್ಷಣೆಗೆ ಕಂಕಣಬದ್ದರಾಗಿ ಕೆಲಸ ಮಾಡುವ ಖಾಕಿಪಡೆ ದೇವರ ಸಮಾನ.ಲಾಕ್‍ಡೌನ್ ಸಮಯದಲ್ಲಿ ಜೀವದ ಹಂಗು ತೊರೆದು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಿದ ಪೆÇಲೀಸ್,ಗ್ರಹರಕ್ಷಕ ದಳ ಸಿಬ್ಬಂದಿ ಸೇವೆಗೆ ಅಭಿನಂದನೆಗಳು.ಪಟ್ಟಣದಲ್ಲಿ ಗ್ರಹರಕ್ಷಕದಳದ ಸ್ವಂತ ಕಚೇರಿಯಾದರೆ ಮತ್ತಷ್ಟು ಮೆರಗುಬರುತ್ತದೆ.ಸರ್ಕಾರ ಗ್ರಹರಕ್ಷಕದಳ ಸಿಬ್ಬಂದಿಯನ್ನು ಖಾಯಂ ಮಾಡಬೇಕು.ಅವರಿಗೆ ಬದ್ರತೆ ನೀಡಬೇಕು ಎಂದು ಆಗ್ರಹಿಸಿದ್ದರು.

ಪುರಸಭೆಯ ವತಿಯಿಂದ ಗ್ರಹರಕ್ಷಕ ದಳ ಸಿಬ್ಬಂದಿಗೆ ಪುರಸಭೆ ವತಿಯಿಂದ ಸಿಗುವ ಯೋಜನೆಗಳು ಒದಗಿಸಲು ಎಲ್ಲ ಸದಸ್ಯರೊಂದಿಗೆ ಬೆಂಬಲ ನೀಡುವುದಾಗಿ ಹೇಳಿದರು.

ಗ್ರಹರಕ್ಷಕ ದಳ ಸಿಬ್ಬಂದಿ ಬೋಧಕ ಎಂ.ಎಂ ಪೂಜಾರ, ಅರೀಫ ಮುಲ್ಲಾ ,ಘಟಕಾ„ರಿ ನಾಗರಾಜ ಗೌಳಿ ಇತರರು ವೇದಿಕೆಯಲ್ಲಿದ್ದರು. ಗ್ರಹರಕ್ಷಕದಳ ಸಿಬ್ಬಂದಿಗಳಾದ ಎಸ್ .ವಿ ಮಾನೆ, ಆರ್.ಎಸ್ ಹದಗಲ್, ಎಸ್.ಟಿ ಗೌಳಿ, ಯು .ಆರ್ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ವಾಲೀಕಾರ, ಡಿ.ವಿ. ಮಠಪತಿ, ಆರ್.ಎಂ ಟೆಂಗಿನಮನೆ, ಕೆ.ಡಿ ಮೋತಿಬಾಯಿ, ಬಿ.ಎಸ್ ಲಾಳಸಂಗಿ,ಆರ್.ಜೆ.ರಾಠೋಡ,ಬಿ.ಸಿ.ಪ್ರಚಂಡಿ,ಎ.ಎಂ.ಕುಂಟೊಜಿ,ಜೆ.ಎ.ಮದುಕರ ಇತರರು ಕಾರ್ಯಕ್ರಮದಲ್ಲಿ ಇದ್ದರು.