ಗೃಹ ರಕ್ಷಕ ದಳದ ಸಿಬ್ಬಂದಿಗೆ ತರಬೇತಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.31: ಮುಂಬರುವ ವಿಧಾನ ಸಭಾ ಚುನಾವಣೆ ಕುರಿತು ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರ.
 ತಾಲೂಕಿನ ಮೂರು ಗೃಹ ರಕ್ಷಕ ದಳದ ಘಟಕದ 156 ಗೃಹ ರಕ್ಷಕ ಸಿಬ್ಬಂದಿಗಳಿಗೆ ಬೆಳಗ್ಗೆ 7:00 ರಿಂದ ಸಂಜೆ 4:00 ರವರೆಗೆ ಚುನಾವಣೆ ಪ್ರಕ್ರಿಯೆ, ಚುನಾವಣೆ ಮತಗಟ್ಟೆಯಲ್ಲಿ ಕರ್ತವ್ಯ, ನೀತಿ ಸಂಹಿತೆ, ಟ್ರಾಫಿಕ್ , ಜನತ ಪ್ರತಿ ನಿತ್ಯದ ಬಗ್ಗೆ ಮತ್ತು ಗೃಹ ರಕ್ಷಕರ ನಡುವಳಿಕೆ ಹಾಗೂ ಲಾಟಿ ಕಾವಯತ್ ತರಬೇತಿಯನ್ನು ತೆಕ್ಕಲಕೋಟೆ ಪಟ್ಟಣದಲ್ಲಿ ನೀಡಲಾಯಿತು.
 ತುಮಕೂರು ಜಿಲ್ಲೆಯ ಸಹಾಯಕ ಬೋಧಕ ಕೆ.ಟಿ ಹನುಮಂತಯ್ಯ, ತೆಕ್ಕಲಕೋಟೆ ಘಟಕ ವೆಂಕಟೇಶ, ಸಿರುಗುಪ್ಪ ಘಟಕ ಬಿ.ಆರ್ ತಿಮ್ಮಯ್ಯ, ಕುರುಗೋಡು ಘಟಕ ಲೋಕೇಶ್ ಬಿ. ಇದ್ದರು.