ಗೃಹ ಜ್ಯೋತಿ ಯೋಜನೆಗೆ ಮುಗಿ ಬಿದ್ದ ಜನತೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,19-  ನಗರದ ಜೆಸ್ಕಾಂ ಕಚೇರಿಗಳ ಮುಂದೆ ಗೃಹ ಜ್ಯೋತಿ ಲಾಭ ಪಡೆಯಲು ಜನತೆ ಮುಗಿಬಿದ್ದಿದ್ದಾರೆ
ಮಾಸಿಕ 200 ಯುನಿಟ್ ವರಗೆ ಗೃಹ ಬಳಕೆದಾರರಿಗೆ ಈ ಯೋಜನೆಯಡಿ ಉಚಿತ ವಿದ್ಯುತ್ ನೀಡಲು ನಿನ್ನೆಯಿಂದ ಅರ್ಜಿ ಸ್ವೀಕರಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
ಇದರಿಂದ ನಗರದ ಜೆಸ್ಕಾಂ ಕಚೇರಿಗಳ  ಮುಂದೆ ಇಂದು ಬೆಳಿಗ್ಗೆಯಿಂದ  ನೂರಾರು ಜನರು ಸಾಲುಗಟ್ಟಿ ನಿಂತಿದ್ದರು.
ಸರ್ವರ್ ಸಮಸ್ಯೆ ಹಿನ್ನಲೆಯಲ್ಲಿ  ಜನರಷ್ಟೇ ಅಲ್ಲದೆ ಅಧಿಕಾರಿಗಳು ಪರದಾಡುತ್ತಿದ್ದರು.
ಈ ಸೌಲಭ್ಯ ಪಡೆಯಲು ಬಿಲ್ ಜೊತೆ ಆಧಾರಕಾರ್ಡು, ಬಾಡಿಗೆ ಮನೆಯಲ್ಲಿದ್ದರೆ ಕರಾರು ಪತ್ರ ಇದ್ದರೆ ಸಾಕು ಎಂದು ಹೇಳಿದ್ದರೂ, ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಒಬ್ರು ಬಾಡಿಗೆ ಮನೆ ಯಾದ್ರೇ, ಮತ್ತೊಬ್ಬರು ಮನೆ ಲೀಜ್ ತೆಗೆದುಕೊಂಡಿವಿ ಏನು ಮಾಡಬೇಕು. ಅನ್ನೋ ಪ್ರಶ್ನೆ.
ಆಧಾರ್ ಕಾರ್ಡ್ ಅಷ್ಟೇ ಬೇಕಾ, ಮನೆ ಅಗ್ರಿಮೆಂಟ್ ಜೊತೆಗೆ ಮನವಿ ಪತ್ರ ನೀಡಬೇಕಾ, ಹೀಗೆ ಜನರ ಪ್ರಶ್ನೆಗಳಿಗೆ ಉತ್ತರ ನೀಡಲು ಅಧಿಕಾರಿಗಳ ಬೇಸತ್ತುಕೊಳ್ಳುವಂತೆ ಆಗಿತ್ತು.
ಅದರಲ್ಲೂ ಈ ತಿಂಗಳು    ಕರೆಂಟ್ ಬಿಲ್ ಹೆಚ್ಚು ಬಂದಿರೋ ಪ್ರಶ್ನೆಯೇ ಹೆಚ್ಚಾಗಿ ಕಾಡುತ್ತಿತ್ತು.
ಒಟ್ಟಿನಲ್ಲಿ ಕರೆಂಟು ಕೊಡಬೇಕಾದ ಸಿಬ್ಬಂದಿ ಈ ಯೋಜನೆಯಿಂದ ಜನರ ಪ್ರಶ್ನೆಗಳಿಗೆ ಉತ್ತರ ನೀಡಲು ಹೊಸ ಗೋಜಿಗೆ ಸಿಕ್ಕಂತಾಗಿದೆ.