
ಕಲಬುರಗಿ:ಆ.03: ಕಲಬುರಗಿ ನಗರದಲ್ಲಿ ಗೃಹ ಜ್ಯೋತಿ ಕಾರ್ಯಕ್ರಮದಹಿನ್ನಲೆಯಲ್ಲಿ ಆಗಸ್ಟ್ 5 ರಂದು ಬೆಳಿಗ್ಗೆ 6 ಗಂಟೆಯಿಂದ 2.00 ಗಂಟೆಯವರೆಗೆ ಸಾರಿಗೆಯಲ್ಲಿ ವ್ಯತ್ಯಯ ಆಗಲಿದ್ದು, ಸಾರ್ವಜನಿಕ ಪ್ರಯಾಣಿಕರು ಸಹಕರಿಸಲು ವಿಭಾಗೀಯ ನಿಯಂತ್ರಣಾಧಿಕಾರಿ ಕಲಬುರಗಿ ವಿಭಾಗ-2 ಕಲಬುರಗಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ಸ್ಥಳಗಳಿಂದ 282 ಕ್ಕಿಂತ ಹೆಚ್ಚಿನ ಸಾರಿಗೆ ಬಸ್ಸ್‍ಗಳು ಕರಾರು ಒಪ್ಪಂದದ ಮೇಲೆ ನೀಡಿರುವುದರಿಂದ ಬೆಳಿಗ್ಗೆ 6 ಗಂಟೆಯಿಂದ 3 ಗಂಟೆಯವರೆಗೂ, ಸಾರಿಗೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಲು ಅವರು ಕೋರಿದ್ದಾರೆ.
ಮಧ್ಯಾಹ್ನ 3 ಗಂಟೆಯಿಂದ ಯಥಾಪ್ರಕಾರ ಸಾರಿಗೆ ಕಾರ್ಯಾಚರಣೆ ಮಾಡಲಾಗುವುದು, ಕಲಬುರಗಿ, ಆಳಂದ, ಜೇವರ್ಗಿ, ಯಡ್ರಾಮಿ, ಅಫಜಲಪೂರ, ತಾಲೂಕುಗಳ ಸಾರ್ವಜನಿಕ ಪ್ರಯಾಣಿಕರ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.