ಗೃಹ ಜ್ಯೋತಿ ಉಚಿತ ಹೇಗೆ ಏನಿದು ಲೆಕ್ಕಾಚಾರ

ಕೋಲಾರ,ಜೂ,೫:ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಪ್ರತಿ ಮನೆಗೆ ೨೦೦ ಯೂನಿಟ್ ಅನ್ನು ಷರತ್ತಿನ ಅಧಾರದ ಮೇಲೆ ಉಚಿತವಾಗಿ ನಿಗಧಿ ಪಡೆಸಲಾಗಿದೆ. ಈ ಯೋಜನೆಯನ್ನು ಜುಲೈ ೧ ರಿಂದ ಗೃಹ ಜ್ಯೋತಿ ಜಾರಿಯಾಗಲಿದೆ.
ಕಳೆದ ವರ್ಷ ಅಂದರೆ ನೀವು ಈ ಹಿಂದೆ ಬಳಕೆ ಮಾಡಿರುವ ೧೨ ತಿಂಗಳ ವಿದ್ಯುತ್ ಯೂನಿಟ್‌ಗಳ ಸರಾಸರಿ ಅಧಾರದ ಮೇಲೆ ಲೆಕ್ಕಾಚಾರ ಹಾಕಲಾಗುವುದು ಅದರ ಮೇಲೆ ಶೇ ೧೦ ಸೇರಿಸಿ ಉಚಿತವಾಗಿ ನೀಡಲಾಗುವುದು. ಅದಕ್ಕಿಂತ ಹೆಚ್ಚಿನ ಬಳಕೆ ಮಾಡಿದರೆ ಪೂರ್ಣ ಶುಲ್ಕವನ್ನು ಬಳಕೆದಾರರೇ ಪಾವತಿಸ ಬೇಕಾಗಿದೆ
ಉದಾಹರಣೆಗೆ ಹೇಳುವುದಾದರೆ ಒಂದು ವರ್ಷದಲ್ಲಿ ೧೨ ತಿಂಗಳು ಬಳಿಸಿರುವ ಸರಾಸರಿ ೧೦೦ ಯೊನಿಟ್ ಅಗಿದ್ದರೆ ಅದಕ್ಕೆ ಶೇ ೧೦ ರಷ್ಟು ಸೇರ್ಪಡೆ ಮಾಡಿದರೆ ಒಟ್ಟು ೧೧೦ ಯೂನಿಟ್‌ಗಳು ನಿಮಗೆ ಉಚಿತವಾಗಿರುತ್ತದೆ. ಈ ರೀತಿ ಯೂನಿಟ್‌ವರೆಗೆ ಮಾತ್ರ ಉಚಿತವಾಗಿರುತ್ತದೆ.
ಒಂದು ವೇಳೆ ನೀವು ನಿಮಗೆ ನಿಗಧಿ ಪಡೆಸಿರುವ ೧೧೦ ಯೊನಿಟ್‌ಗಿಂತ ಒಂದು ಯೂನಿಟ್ ಹೆಚ್ಚಾಗಿ ಬಳಕೆ ಮಾಡಿದಲ್ಲಿ ಅಂದರೆ ೧೩೦ ಯೂನಿಟ್ ಬಳಿಸಿದಲ್ಲಿ ಆಗಾ ನೀವು ಹೆಚ್ಚುವರಿ ೨೦ ಯೂನಿಟ್‌ಗಳ ಬಿಲ್ ಪಾವತಿಸ ಬೇಕು ಒಂದು ವೇಳೆ ೨೦೦ ಯೊನಿಟ್‌ಗಿಂತ ಒಂದು ಯೊನಿಟ್ ಹೆಚ್ಚು ಬಳಕೆ ಮಾಡಿದರೆ ನೀವು ಪೂರ್ಣ ಬಿಲ್ ೨೦೦೧ ಯೂನಿಟ್‌ಗಳ ಬಿಲ್ ಮೊತ್ತವನ್ನು ಪಾವತಿಸ ಬೇಕಾಗುತ್ತದೆ.

  • ಈ ಯೋಜನೆಯ ಲಾಭ ಪಡೆಯಲು ಇಚ್ಚಿಸುವವರು ಜುಲೈ ೧ರವರೆಗೆ ಬಳಕೆ ಮಾಡಿರುವ ವಿದ್ಯುತ್‌ನ ಯಾವೂದೇ ಶುಲ್ಕ ಪಾವತಿ ಬಾಕಿ ಒಟ್ಟು ಕೊಳ್ಳುವಂತಿಲ್ಲ. ಈ ಬಾಕಿ ಪಾವತಿಗೆ ೩ ತಿಂಗಳ ಗಡುವು ವಿಧಿಸಿ ಪೂರ್ಣ ಪ್ರಮಾಣದ ಶುಲ್ಕ ವಸೂಲಿ ಮಾಡಲಾಗುತ್ತದೆ. ಇದನ್ನು ಸರ್ಕಾರ ಭರಿಸುವುದಿಲ್ಲ.
  • ಗರಿಷ್ಟ ೨೦೦ ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದ್ದರೂ ಫಲಾನುಭವಿಗಳು ವಿದ್ಯುತ್ ಬಳಕೆಯ ಹಿಂದಿನ ೧೨ ತಿಂಗಳ ಸರಾಸರಿಯನ್ನು ಲೆಕ್ಕಹಾಕಿ ಅದಕ್ಕೆ ಶೇ ೧೦ ರಷ್ಟು ಹೆಚ್ಚುವರಿ ಯೂನಿಟ್‌ಗಳನ್ನು ಸೇರ್ಪಡೆ ಮಾಡಿ ಅಷ್ಟು ಯೂನಿಟ್‌ಗಳನ್ನು ಬಳಕೆ ಮಾಡಿದರೆ ಮಾತ್ರ ಉಚಿತ ವಿದ್ಯುತ್ ನೀಡಲಾಗುವುದು.
  • ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್ ಸೌಲಭ್ಯ ಅನ್ವಯವಾಗಲಿದೆ. ಬಾಡಿಗೆ ಮನೆಗಳ ವಿದ್ಯುತ್ ಸಂರ್ಪಕದ ಮೀಟರ್ ಮನೆ ಮಾಲೀಕರ ಹೆಸರಿನಲ್ಲಿ ಇರುತ್ತದೆ. ಅದನ್ನು ಹೇಗೆ ಗುರುತಿಸಲಾಗುತ್ತದೆ ಎಂಬುವುದರ ಬಗ್ಗೆ ಸ್ವಷ್ಟನೆ ಇಲ್ಲ. ಅದರೆ ಬಾಡಿಗೆ ಮನೆಗಳಲ್ಲಿರುವರಿಗೂ ಗೃಹ ಜ್ಯೋತಿ ಖಚಿತ ಎಂದು ಮುಖ್ಯ ಮಂತ್ರಿಗಳು ಸ್ವಷ್ಟ ಪಡೆಸಿದ್ದಾರೆ.
  • ಸರ್ಕಾರವು ದೆಹಲಿ ರಾಜ್ಯದಲ್ಲಿನ ಆಡಳಿತದ ಮಾದರಿಯನ್ನು ಅಧ್ಯಾಯನ ಮಾಡಿದೆ. ಅದರೆ ಅದನ್ನು ಪುನರಾವರ್ತಿಸಿಲ್ಲ ಇದು ಕರ್ನಾಟಕಕ್ಕೆ ಹೊಸ ಮಾದರಿಯಾಗಿದೆ.ಪಂಜಾಬ್ ಕೊಡ ವಿಭಿನ್ನ ಮಾದರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಬ್ಬ ಗ್ರಾಹನ ವಿದ್ಯುತ್ ಬಳಕೆ ೨೦೦ ಯೂನಿಟ್‌ಗಳಿಗಿಂತ ಹೆಚ್ಚಾಗಿದ್ದರೆ ಗ್ರಾಹಕರು ಪೂರ್ಣ ಬಿಲ್ ಪಾವತಿಸ ಬೇಕಾಗುತ್ತದೆ