
ರಾಯಚೂರು,ಆ.೦೩-ಲಖೀಂಪುರ್ ಖೇರಿ ರೈತರ ಹತ್ಯೆ ಪ್ರಮುಖ ಸಂಚುಕೋರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇಣಿ ಇವರನ್ನು ಸಂಪುಟದಿಂದ ವಜಾಗೊಳಿಸಿ ಬಂಧನ ಮಾಡುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮತಿ ಪದಾಧಿಕಾರಿಗಳು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರ ಬಿಜೆಪಿ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ವಿರೋಧಿ ಕಾರ್ಪೊರೇಟ್ ಪರ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒಂದು ವರ್ಷಗಳ ಕಾಲ ನಡೆಸಿದ ಐತಿಹಾಸಿಕ ಹೋರಾಟದ ಸಂದರ್ಭದಲ್ಲಿ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇಣಿ ರವರ ಪುತ್ರ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತರನ್ನು ಹತ್ಯೆ ನಡೆಸಿದ ದಿನವಾದ ಇಂದು ಅವರನ್ನು ಬಂಧನ ಮಾಡುವಂತೆ ಆಗ್ರಹಿಸಿದರು.
ಲಖೀಂಪುರ್ ಖೇರಿ ರೈತ ಹತ್ಯಾಕಾಂಡದ ಪ್ರಮುಖ ಹಾಗೂ ಪ್ರಧಾನ ಸಂಚುಕೋರ ಅಜಯ್ ಮಿಶ್ರಾ ತೇಣಿರವರನ್ನು ಕೂಡಲೇ ಕೇಂದ್ರ ಸಂಪುಟದಿಂದ ವಜಾ ಮಾಡಿ ಬಂಧಿಸಬೇಕು.
ದೆಹಲಿ ಐತಿಹಾಸಿಕ ಹೋರಾಟದ ಸಂದರ್ಭದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನಾಯಕತ್ವಕ್ಕೆ ನೀಡಿದ ಲಿಖಿತ ಭರವಸೆಗಳನ್ನು ಈಡೇರಿಸಬೇಕು.
ವಿದ್ಯುತ್ ತಿದ್ದುಪಡಿ ಮಸೂದೆ ೨೦೨೨ ಅನ್ನು ರದ್ದುಪಡಿಸಬೇಕು.
ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು.
ಐತಿಹಾಸಿಕ ದೆಹಲಿ ಹೋರಾಟದ ಸಂದರ್ಭದಲ್ಲಿ ಹಾಕಿರುವ ಮೊಕದ್ದಮೆಗಳನ್ನು ವಾಪಸ್ಸು ಪಡೆಯಬೇಕು.
ಪ್ರವಾಹ ಹಾಗೂ ಬರಗಾಲದ ಪ್ರಾಕೃತಿಕ ವಿಕೋಪಗಳಿಗೆ ಪರಿಹಾರ ಒದಗಿಸಬೇಕು. ಕೃಷಿ ಉತ್ಪನ್ನಗಳ ಕನಿಷ್ಟ ಬೆಂಬಲ ಬೆಲೆ ( ಒಖಕಿ) ಖಾತರಿ ಕಾನೂನು ಜಾರಿ ಮಾಡಬೇಕು. ಪ್ರತಿಯೊಂದು ದುಡಿಮೆಗೂ ಜೀವನಾವಶ್ಯಕ ಕನಿಷ್ಟ ವೇತನವಾಗಿ ಮಾಸಿಕ ೨೬೦೦೦ ರೂ ನಿಗದಿಪಡಿಸಬೇಕು.
ರೈತರ ಹಾಗೂ ಎಲ್ಲಾ ಗ್ರಾಮೀಣ ಜನರ ಸಾಲಗಳನ್ನು ಮನ್ನಾ ಮಾಡಬೇಕು.
ಪ್ರತಿಯೊಬ್ಬರಿಗೂ ಕನಿಷ್ಟ ಹತ್ತು ಸಾವಿರ ರೂಗಳ ನಿವೃತ್ತಿ ವೇತನವನ್ನು ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು.
ಈ ಸಂದರ್ಭದಲ್ಲಿ ಎಸ್ ಮಾರೆಪ್ಪ ವಕೀಲರು,
ಕೆ. ಜಿ ವಿರೇಶ, ಡಿ. ಎಸ್ ಶರಣಬಸವ, ಆಂಜನೇಯ ಕುರುಬದೊಡ್ಡಿ, ಎಚ್ ಪದ್ಮಾ ಸೇರಿದಂತೆ ಉಪಸ್ಥಿತರಿದ್ದರು.