ಗೃಹ ಕಾರ್ಮಿಕರ ವೃತ್ತಿ ಸಂಘಟನೆಯಿಂದ ಜೂ.೨೧ ಕ್ಕೆ ಪ್ರತಿಭಟನೆ

ದಾವಣಗೆರೆ.ಜೂ.೧೯: ಅಂತಾರಾಷ್ಟ್ರೀಯ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ವತಿಯಿಂದ ಜೂನ್ ೨೧ ರ  ಮಧ್ಯಾಹ್ನ ೧೨ ಗಂಟೆಗೆ ನಗರದ ರೋಟರಿ ಭವನದಲ್ಲಿ ಅಂತರ್ ರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಡಿಡಬ್ಲ್ಯೂ ಕಾರ್ಯಕರ್ತೆ ಆರ್. ರಂಗಮ್ಮ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ವಹಿಸಲಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಕಾರ್ಮಿಕ ಅಧಿಕಾರಿ ಇಬ್ರಾಹಿಂ ಉಪಸ್ಥಿತರಿರುವರು ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಪ್ರಭಾ ಮಲ್ಲಿಕಾರ್ಜುನ್, ಮೇಯರ್ ವಿನಾಯಕ ಪೈಲ್ವಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್, ಶಿವಾನಂದ್ ಕಾಪಶಿ, ಪಿ.ಎಸ್. ನಾಗರಾಜ್ ಆಗಮಿಸಲಿದ್ದು, ಅಖಿಲ ಕರ್ನಾಟಕ ಗೃಹ ಕಾರ್ಮಿಕರ ಚಳುವಳಿ ಸಹ ಸಂಯೋಜಕಿ ಸಿಸ್ಟರ್ ನಿಶಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ, ಕಾರ್ಯಕರ್ತೆಯರಾದ ವಿ. ಲಕ್ಷ್ಮೀ, ಸುಜಾತ, ಜಿ. ಬಸಮ್ಮ ಉಪಸ್ಥಿತರಿದ್ದರು.