ಗೃಹಿಣಿ ಶಂಕಾಸ್ಪದ ಸಾವು

ಹಾಸನ,ನ.3-ಗೃಹಿಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಶಂಕಾಸ್ಪದವಾಗಿ ಸಾವನ್ನಪ್ಪಿದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಗೂಳಿಹೊನ್ನೇನಹಳ್ಳಿಯಲ್ಲಿ ನಡೆದಿದೆ.
ನೆಟ್ಟೇಕೆರೆಯ ಲಕ್ಷ್ಮಿದೇವಿ(22) ಮೃತಪಟ್ಟವರು, ಗೂಳಿಹೊನ್ನೇನಹಳ್ಳಿಯ ಗುರುರಾಜ ಎಂಬಾತನ ಜೊತೆ ಒಂದೂವರೆ ವರ್ಷದ ಹಿಂದೆ ಲಕ್ಷ್ಮಿದೇವಿ
ಮದುವೆ ಮಾಡಿ ಕೊಡಲಾಗಿತ್ತು. ಲಕ್ಷ್ಮಿದೇವಿಗೆ ಇತ್ತೀಚೆಗೆ ಹೆಣ್ಣು ಮಗು ಜನಿಸಿದ್ದರಿಂದ ಪತಿಯ ಮನೆಯವರು ಕಿರುಕುಳ ನೀಡಲಾರಂಭಿಸಿದ್ದರು ಎಂದು ಮೃತಳ ತಂದೆ ಶಿವಲಿಂಗೇಗೌಡ ಆರೋಪ ಮಾಡುತ್ತಿದ್ದಾರೆ.
ಹೆಣ್ಣು ಮಗು ಹೆತ್ತಿದ್ದೀಯಾ ಹಾಗಾಗಿ‌‌ 5 ಲಕ್ಷ ಹಣ ತರಬೇಕು. ಇಲ್ಲದಿದ್ದರೆ ನಿಮ್ಮ ತವರು ಮನೆಗೆ ವಾಪಸ್ ಹೋಗು ಎಂದು ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ಘಟನೆ ನಂತರ ಮೃತಳ ಪತಿ ಮನೆಯವರು ನಾಪತ್ತೆಯಾಗಿದ್ದಾರೆ. ಹೀಗಾಗಿ ಮೃತಳ ಶವವನ್ನು ಗಂಡನ ಮನೆ ಮುಂದೆಯಿಟ್ಟು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಗಂಡನ ಮನೆಯವರನ್ನು ಕೂಡಲೇ ಬಂಧಿಸದಿದ್ದರೆ ಮನೆ ಮುಂದೆಯೇ ಅಂತ್ಯಸಂಸ್ಕಾರ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ. ವಿಷಯ ತಿಳಿದ ತಕ್ಷಣ ಹಿರೀಸಾವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.