ಗೃಹಿಣಿ ನಾಪತ್ತೆ ಠಾಣೆಯಲ್ಲಿ ಪಾಲಕರಿಂದ ದೂರು

ಸೇಡಂ, ಸ,14: ಗೃಹಣಿ ಒಬ್ಬಳು ದಿನಾಂಕ 9. 9. 2022 ರಂದು ಬೆಳಿಗ್ಗೆ ನಾಪತ್ತೆಯಾಗಿರುವ ಘಟನೆ ನಡೆದಿದ್ದು ಮುಧೋಳ ಪೆÇೀಲಿಸ್ ಠಾಣೆಯಲ್ಲಿ ಗೃಹಣಿಯ ಪಾಲಕರು ದೊರಕಿಸಿ ಕೊಡುವಂತೆ ದೂರ ನೀಡಿದ್ದಾರೆ.

ತಾಲೂಕಿನ ಮುಧೋಳ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸೋಮಪಲ್ಲಿ ಗ್ರಾಮದ ಶಾಮರೆಡ್ಡಿ ಅವರ ಧರ್ಮಪತ್ನಿ ಸ್ವಾತಿ ನನ್ನ ಮಗಳಾಗಿದ್ದು 5 ವರ್ಷಗಳ ಹಿಂದೆ ಕೊಟ್ಟು
ಮದುವೆ ಮಾಡಿದ್ದು ಅವರಿಗೆ ಇನ್ನು ಮಕ್ಕಳಾಗಿರುವುದಿಲ್ಲ ಅಂದು ಬೆಳಗ್ಗೆ 06-00 ಗಂಟೆಗೆ ಸುಮಾರಿಗೆ ಮನೆಯಿಂದ ಹೊರಗೆ ಹೋದವಳು ವಾಪಾಸ ಬಂದಿರುವುದೆಲ್ಲ ಎಂದು ಮಗಳ ಗಂಡ ಹೇಳಿದ್ದಾರೆ ಎಂದು ಸ್ವಾತಿ ಅವರ ತಂದೆಯಾದ ಹರೀಶ್ ರೆಡ್ಡಿ ಅವರು ಪ್ರಕರಣದಲ್ಲಿ ಹೇಳಿಕೆ ನೀಡಿದ್ದಾರೆ.

ಮುಧೋಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.

ಮಗಳ ಮದುವೆಗೆ 10 ಲಕ್ಷ ರೂಪಾಯಿ ವರದಕ್ಷಣೆ ಬಂಗಾರ ನೀಡಿದ್ದೇವೆ ಐದು ವರ್ಷವಾಯಿತು ಮಕ್ಕಳಾಗಿರುವುದಿಲ್ಲ, ಮಗಳ ಮತ್ತು ಅಳಿಯನ ನಡುವೆ ಸಣ್ಣಪುಟ್ಟ ಜಗಳ ಮಾಡಿಕೊಳ್ಳುತ್ತಿದ್ದರು ಎಂಬ ಮಾಹಿತಿ ಕೇಳಿದೆ, ಇಬ್ಬರು ನಾದಿನಿಯರು ಅವರ ತಾಯಿ ಇದ್ದಾರೆ.

ಹರೀಶ್ ರೆಡ್ಡಿ ಮಹಿಳೆ ತಂದೆ