
ಸಂಡೂರು:: 4: ಸರ್ಕಾರದ ಮಹತ್ವಾಂಕ್ಷಿ ಯೋಜನೆ ಗೃಹಲಕ್ಷ್ಮೀ ಯೋಜನೆ ನೊಂದಣೆ ಗೆ ಸಂಬಂಧಸಿದಂತೆ ತಾಲೂಕಿನ ಅಂಕಮನಾಳ್ ಗ್ರಾಮದ ಗ್ರಾಮೊನ್ ಸೇವಾ ಕೇಂದ್ರದಲ್ಲಿ ಕಂಪ್ಯೂಟರ್ ಅಪರೇಟರ್ ದೇವರಾಜ ಎನ್ನುವಾತ ಅರ್ಜಿ ಸಲ್ಲಿಸಲು 50 ರೂಪಾಯಿಗಳನ್ನು ಪಡೆಯುತ್ತಿರುವಾಗ ಸಿಕ್ಕಿಬಿದ್ದಿದ್ದು ಈತನ ಮೇಲೆ ಚೋರನೂರು ಠಾಣೆಯಲ್ಲಿ ದೂರು ಧಾಖಲಾಗಿದ್ದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಕಮನಾಳ್ ಗ್ರಾಮದ ಮಾರೆಮ್ಮ ಗುಡಿ ಹತ್ತಿರ ಸಾರ್ವಜನಿಕ ಸಥಳದಲ್ಲಿ ಕುಳಿತು ಉದ್ದೇಶ ಪೂರ್ವಕವಾಗಿ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಪ್ರತಿ ಅರ್ಜಿಗೆ 50 ರೂಪಾಯಿ ಹಣ ಸ್ವೀಕರಿಸಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಅಗಸ್ಟ್ 1 ರಂದು ಮಧ್ಯಾಹ್ನ ಅಧಿಕಾರಿಗಳ ತಂಡವು ದಾಳಿ ನಡೆಸಿತು, ಅಧಿಕಾರಿಗಳಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಏಳೆ ನಾಗಪ್ಪ ತಂಡ ದಾಳಿ ನಡೆಸಿದೆ, ಈ ಸಂದರ್ಭದಲ್ಲಿ ಪಟ್ಟಣದ ಕಂದಾಯ ನಿರೀಕ್ಷಕ ಬಿ.ವೀರೇಂದ್ರಕುಮಾರ ಇತರರು ಭಾಗಿಯಾಗಿ ಅಕ್ರಮವನ್ನು ಪತ್ತೆ ಹಚ್ಚಿ ಅದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಅತನ ವಿರುದ್ದ ಕೇಸು ದಾಖಲಿಸಲಾಗಿದೆ.
ಸರ್ಕಾರ ಯಾವುದೇ ರೀತಿಯಲ್ಲಿ ಹಣ ಸ್ವೀಕರಿಸಬಾರದು ಎಂದು ತಿಳಿಸಿದಾಗ್ಯೂ ಈ ರೀತಿ ಹಣ ಪಡೆಯುತ್ತಿರುವುದು ಅಪರಾಧವಾಗಿದ್ದು ಅದ್ದರಿಂದ ಅತನ ವಿರುದ್ಧ ದೂರು ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನ ಅಂಕಮನಾಳ್ ಗ್ರಾಮದಲ್ಲಿ ಗೃಹಲಕ್ಷ್ಮೀ ಯೋಜನೆ ನೊಂದಣೆಗೆ 50 ರೂಪಾಯಿ ಹಣ ಸ್ವೀಕರಿಸುತ್ತಿರುವುದನ್ನು ಅಧಿಕಾರಿಗಳು ದಾಳಿ ನಡೆಸಿ ಅತನ ವಿರುದ್ದ ಕೇಸು ದಾಖಲಿಸಿದ್ದಾರೆ.