ಗೃಹಲಕ್ಷ್ಮೀ ಯೋಜನೆಯ ನೋಂದಣಿ ಕೇಂದ್ರ ಉದ್ಗಾಟನೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜು.25 :- ಸೋಮವಾರ ಪುರಸಭೆಯ ಇಲಾಖೆ ವತಿಯಿಂದ  ಗೃಹಲಕ್ಷ್ಮಿ ಯೋಜನೆಯ ನೋಂದಣಿ ಕೇಂದ್ರ ಉದ್ಘಾಟನೆಯನ್ನು ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್ ನೆರವೇರಿಸಿದರು
ನಂತರ ಮಾತನಾಡಿದ ಅವರು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗಳು ನಡೆದವು ವಿರೋಧ ಪಕ್ಷದವರು ಗೃಹಲಕ್ಷ್ಮಿ ಯೋಜನೆಯು ಅತ್ತೆ ಸೊಸೆಗೆ ಜಗಳ ಹಚ್ಚುವ ಯೋಜನೆ ಎಂದು ಮಾತನಾಡುತ್ತಾರೆ ನಾವು ಅತ್ತೆ ಸೊಸೆಗೆ ಜಗಳ ಹಚ್ಚುವ ಕೆಲಸ ಮಾಡುವುದಿಲ್ಲ ಹೆಣ್ಣು ಮಕ್ಕಳಿಗೆ ಆರ್ಥಿಕವಾಗಿ ಸದೃಢವಾಗುವುದಕ್ಕೆ ಇಂತಹ ಗೃಹಲಕ್ಷ್ಮಿ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು
ಬಿಪಿಎಲ್ ಪಡಿತರ ಕಾರ್ಡಿನ ಪ್ರತಿಯೊಂದು ಕುಟುಂಬದ ಯಜಮಾನಿಗೆ  ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತದೆ ಗ್ರಾಮ ವನ್ ಸೇವಾ ಸಿಂಧು ಕೇಂದ್ರಗಳಲ್ಲಿ ಪ್ರತಿ ದಿನ ಅರವತ್ತು ಜನರ ನೋಂದಣಿ ಮಾಡುವುದಕ್ಕೆ ಅವಕಾಶವಿದೆ ಮೊದಲು ನೋಂದಣಿಯನ್ನು ಮಾಡಿಸಬೇಕು ನಂತರ ನಿಮ್ಮ ಮೊಬೈಲಿಗೆ ಒಂದು ಮೆಸೇಜ್ ಬರುತ್ತೆ ನಮ್ಮ ಕಾಂಗ್ರೆಸ್ ಸರ್ಕಾರ ಒಂದು ಕೋಟಿ 28 ಲಕ್ಷ ಮನೆ ಯಜಮಾನನಿಗೆ ಗೃಹಲಕ್ಷ್ಮಿ ಯೋಜನೆಗೆ 36,000 ಕೋಟಿ ಬಜೆಟಿನಲ್ಲಿ ಈ ಯೋಜನೆಗೆ ಹಣವನ್ನು ತೆಗೆದು ಇಟ್ಟಿದ್ದಾರೆ ನೊಂದಣಿ ಮಾಡಿಸುವುದಕ್ಕೆ ಯಾರು ದುಡ್ಡು ಕೊಡುವ ಅವಶ್ಯಕತೆ ಇಲ್ಲ ಸರ್ಕಾರನೇ ಪ್ರತಿಯೊಂದು ನೋಂದಣಿಗೆ 20ರೂ ಕೊಡುತ್ತದೆ ನೊಂದಣಿ ಕೇಂದ್ರದವರು ಯಾರ ಬಳಿಯಾದರೂ ಹಣವನ್ನು ಕೇಳಿದರೆ ಆ ಕೇಂದ್ರವನ್ನು ರದ್ದು ಮಾಡಲಾಗುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ. ಶಿವಕುಮಾರ್ ಬಿರಾದರ್. ತಾಲೂಕು ಪಂಚಾಯಿತಿ ನಿರ್ವಾಹಕ ಅಧಿಕಾರಿ ಪ್ರಕಾಶ್. ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ್ ಯರಗುಡಿ. ಆರೋಗ್ಯಧಿಕಾರಿ ಮಂಜುನಾಥ್.ಪುರಸಭೆ ಸದಸ್ಯರುಗಳಾದ ಎಂವಿ ಅಂಜಿನಪ್ಪ. ಹನುಮವ್ವ ಸಣ್ಣಹಾಲಪ್ಪ. ಉದ್ದಾರ ಗಣೇಶ್. ಅಬ್ದುಲ್ ರೆಹಮಾನ್. ಚಿಕ್ಕೇರಿ ಬಸಣ್ಣ. ಮುಖಂಡರಾದ ವೈ ಕೆ ದುರ್ಗಪ್ಪ. ಹುಲಿಕಟ್ಟಿ ಚಂದ್ರಪ್ಪ. ಸಣ್ಣ ಹಾಲಪ್ಪ. ಬಸವರಾಜ್ ಮತ್ತೂರ್. ಶಿವಕುಮಾರ್ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು