ಗೃಹಲಕ್ಷ್ಮೀ ಪಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿದ ಶಾಸಕರು

ಇಳಕಲ್:ಸೆ.4: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮತ್ತು ನಗರಸಭೆ ಕಾರ್ಯಾಲಯ ಇಲಕಲ್ಲ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನಾಡ ಗೀತೆ ಯೊಂದಿಗೆ ಪ್ರಾರಂಭಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಲ್ ಸಿ ಡಿ ಪರದೆ ಮೇಲೆ ಮೈಸೂರಿನಲ್ಲಿ ನಡೆಯುತ್ತಿರುವ ಸರ್ಕಾರದ ಕಾರ್ಯಕ್ರಮದ ನೇರಪ್ರಸಾರವನ್ನು ಶಾಸಕ ವಿಕಯಾನಂದ ಕಾಶಪ್ಪನವರ್ ಫಲಾನುಭವಿಗಳು ಜೋತೆ ಕುಳಿತು ವೀಕ್ಷಿಸಿದರು.
ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಯಾದ ಗೃಹಲಕ್ಷ್ಮಿ ಕುರಿತು ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್ ನಮ್ಮ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳಲ್ಲಿ ನಾಲ್ಕನೇ ಗ್ಯಾರಂಟಿಯನ್ನು ನಾವು ಇಂದು ಈಡೇರಿಸಿದ್ದೇವೆ. ನುಡಿದಂತೆ ನಡೆಯುವ ಯಾವುದಾದರೂ ಸರ್ಕಾರ ಇದ್ದರೆ ಅದು ನಮ್ಮ ಕಾಂಗ್ರೆಸ್ ಸರ್ಕಾರ, ಹೀಗಾಗಿ ಜನ ಪರವಾಗಿ ಕೆಲಸ ಮಾಡುವ ಸರ್ಕಾರ ನಮ್ಮದಾಗಿದೆ ಎಂದರು.
ತಹಶಿಲ್ದಾರರ ನಿಂಗಪ್ಪ ಬಿರದಾರ,ಸಿಡಿಪಿಓ ಅನ್ನಪೂರ್ಣ ಕುಬ್ಬಕಡ್ಡಿ,ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಚ್ ಮುರಳಿಧರ್ ಪೌರಾಯುಕ್ತ ಶ್ರೀನಿವಾಸ ಜಾಧವ
ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ, ರೇಷ್ಮಾ ಮಾರನಬಸರಿ,ಅಮೃತ ಬಿಜ್ಜಲ್ ,ಮೌಲೇಶ ಬಂಡಿ ವಡ್ಡರ,ಸುಧಾರಣಿ ಸಂಗಮ,ವೆಂಕಟೇಶ ಸಾಕಾ
ಅಬ್ದುಲ್ ರಜಾಕ ತಟಗಾರ, ವೆಂಕಟೇಶ ಸಾಕ, ಹಾಗೂ ನೂರಾರು ಸಂಖ್ಯೆಯಲ್ಲಿ
ಮಹಿಳೆಯರು ಭಾಗವಹಿಸಿದ್ದರು.