ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾಯ೯ಕ್ರಮ, ತುಂಬಿ ತುಳುಕಿದ ಫಲಾನುಭವಿಗಳು

ಮುದಗಲ್ಲ,ಆ.೩೧- ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮತ್ತು ಮುದಗಲ್ಲ ಪುರಸಭೆ ಕಾರ್ಯಾಲಯ ಇವರ ಸಂಯುಕ್ತ ಆಶ್ರಯ ದಲ್ಲಿ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ ಮುದಗಲ್ಲ ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕುಂಭ ಹಾಗೂ ಕಳಸಾ ಮೆರವಣಿಗೆ ಸ್ವಸಹಾಯ ಗುಂಪುಗಳ ಮಹಿಳೆಯರ ಮುಖಾಂತರ ಜರುಗಿತು.
ಜೋತಿ ಬೆಳಗುವ ಮುಖಾಂತರ ಪುರಸಭೆ ಸದಸ್ಯರು ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಇರುವ ಪುರಸಭೆ ಸದಸ್ಯರು, ಮುಖ್ಯಾಧಿಕಾರಿ ಇವರು ಉದ್ಘಾಟನೆ ನೆರವೇರಿ ಸಲಾಯಿತು.
ಈ ಸಂದರ್ಭದಲ್ಲಿ ಮುದಗಲ್ಲ ಪುರಸಭೆ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ,ಪುರಸಭೆ ಸದಸ್ಯರಾದ ಅಮೀರಬೇಗಂ ಉಸ್ತಾದ್, ಶ್ರೀಕಾಂತ ಗೌಡ, ಎಸ್ ಆರ್ ರಸೂಲ್ ಸಾಬ, ಬಾಬುಉಪ್ಪಾರ ,ಹನುಮಂತ ನಾಯಕ, ಹಾಗೂ ಗಣ್ಯರಾದ ಕರಿಯಪ್ಪ ಯಾದವ , ನಾಗರಾಜ್ ತಳವಾರ, ಪುರಸಭೆ ಸಿಬ್ಬಂದಿ ಚನ್ನಮ್ಮ ದಳವಾಯಿ ,ನೈಮಲ್ಯ ಅಧಿಕಾರಿಗಳಾದ ಆರೀಪ್ ಹುನ್ನಿಸಾ ,ಹಾಗೂ ರೈಮತ್ ಹುನ್ನಿಸಾ, ಬಸವರಾಜ ,ಜಿಲಾನಿಪಾಶ ಅಂಗನವಾಡಿ ಕಾರ್ಯಕರ್ತೆ ಯರು, ಸ್ವಸಹಾಯ ಗುಂಪುಗಳ ಹಾಗೂ ಪುರಸಭೆ ಸಿಬ್ಬಂದಿಗಳು ಮತ್ತು ಮಹಿಳೆಯರು ಉಪಸ್ಥಿತರಿದ್ದರು.
ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾಯ೯ಕ್ರಮಕ್ಕೆ ಸಾವಿರಾರು ಮಹಿಳೆಯರ ತುಂಬಿ ತುಳುಕಿ ಕಾರ್ಯ ಕ್ರಮ ದಲ್ಲಿ ಮಹಿಳೆಯರ ಸಂತೋಷದ ವಾತಾವರಣ ಕಂಡುಬಂದಿತು.