
ನವಲಗುಂದ,ಆ31: ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಜಾರಿಗೆ ತಂದಿರುವ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಿಂದಾಗಿ ಕಿಕ್ಕಿರಿದು ಭಾಗವಹಿಸಿದ್ದ ಮಹಿಳೆಯರ ಮುಖದಲ್ಲಿ ಮೂಡಿರುವ ಮಂದಹಾಸ ನೋಡಿ ಹಂಡೆ ಹಾಲು ಕುಡಿದಷ್ಟು ಸಂತೋಷವಾಗಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹರ್ಷ ವ್ಯಕ್ತಪಡಿಸಿದರು.
ಸ್ಥಳೀಯ ಪುರಸಭೆಯ ವತಿಯಿಂದ ಗವಿಮಠದಲ್ಲಿ ಏರ್ಪಡಿಸಿದ ಗೃಹಲಕ್ಷ್ಮಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮವನ್ನು ದೀಪ ಬೆಳೆಗಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಬೆಲೆ ಏರಿಕೆಯಿಂದಾಗಿ ದಿನನಿತ್ಯದ ಖರ್ಚು ವೆಚ್ಚ ಸರಿದೂಗಿಸಲು ನೇರವಾಗಿ ಯಜಮಾನಿ ಖಾತೆಗೆ ಪ್ರತಿ ತಿಂಗಳು ರೂ.2 ಸಾವಿರ, ಸಾರಿಗೆ ಬಸ್‍ಗಳಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣ, ಉಚಿತ ವಿದ್ಯುತ್‍ಶಕ್ತಿ, ಹೊಟ್ಟೆ ತುಂಬಾ ಊಟ ಮಾಡಲು ಅನ್ಯಭಾಗ್ಯದ ಕೊಡುಗೆ ನೀಡಲಾಗಿದೆ. ಯುವಕರ ನಿರುದ್ಯೋಗದ ಸಮಸ್ಯೆಗೆ ಸಹಾಯಧನವಾಗಿ ಪ್ರತಿ ತಿಂಗಳು ಪದವಿ ವಿದ್ಯಾರ್ಥಿಗಳಿಗೆ ರೂ.3 ಸಾವಿರ, ಡಿಪೆÇ್ಲೀಮಾ ವಿದ್ಯಾರ್ಥಿಗಳಿಗೆ ರೂ.1500 ಕೊಡುವ ಯೋಜನೆಯನ್ನು ಸದ್ಯದಲ್ಲಿಯೇ ಜಾರಿಗೆ ತರಲಿದ್ದು ಎಲ್ಲ ಮಹಿಳೆಯರು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಹೇಳಿದರು.
ಗವಿಮಠದ ಬಸವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅರೆಮನೆ ನಗರ ಮೈಸೂರಿನಲ್ಲಿ ನಡೆದ ಗೃಹಲಕ್ಷ್ಮಿ ಲೋಕಾರ್ಪಣೆ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ಹುರಕಡ್ಲಿ ಅಜ್ಜನವರ ಕಲ್ಯಾಣ ಕೇಂದ್ರ, ಶಂಕರ ಮಹಾವಿದ್ಯಾಲಯ, ಸರ್ಕಾರಿ ಪದವಿ ಕಾಲೇಜು, ಶಾದಿಮಹಲ್ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.
ತಹಶೀಲ್ದಾರ್ ಸುಧೀರ ಸಾಹುಕಾರ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗಿರದಾರ, ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಯೋಜನಾ ನಿರ್ದೇಶಕರಾದ ಪಿ.ಎಸ್.ರಮೇಶ, ಸಿ.ಡಿ.ಪಿ.ಒ ವಿಜಯಲಕ್ಷ್ಮಿ ಪಾಟೀಲ್, ಮುದಕವ್ವ ಬೆಂಡಿಗೇರಿ, ಪದ್ಮಾವತಿ ಪೂಜಾರ ಹುಸೇನಬಿ ಧಾರವಾಡ, ಖೈರುನಾಬಿ ನಾಶಿಪುಡಿ ಫರಿದಾಬೇಗಂ ಬಬರ್ಚಿ ಮಂಜುಳಾ ಬೆಂಡಿಗೇರಿ, ಶೋಭಾ ಹೆಬ್ಬಳ್ಳಿ, ಜೆ.ಎಸ್.ಖಣವಿ, ಶೋಭಾ ಹೆಬ್ಬಳ್ಳಿ, ಆಶೀಫ್ ನಾಶಿಪುಡಿ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖಂಡರಾದ ಆರ್ .ಎಚ್.ಕೋನರಡ್ಡಿ, ವಿಜಯಗೌಡ ಪಾಟೀಲ್, ಸದುಗೌಡ ಪಾಟೀಲ್ ಇತರರು ಉಪಸ್ಥಿತರಿದ್ದರು.